ಮನರಂಜನೆಸಿನಿಮಾಸೆಲೆಬ್ರಿಟಿ

ವರುಡು ಕಾವಲೆನು’ ಚಿತ್ರದ ‘ಡಿಗು ಡಿಗು ನಾಗಾ’ ಹಾಡಿಗೆ ಎದುರಾಗಿದೆ ಸಂಕಷ್ಟ

ಆಗಸ್ಟ್ 4ರಂದು ನಟ ನಾಗ ಶೌರ್ಯ ನಟನೆಯ ಮುಂಬರುವ ಬಹುನಿರೀಕ್ಷೆಯ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ‘ವರುಡು ಕಾವಲೆನು’ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಲಾಯಿತು. ಇದನ್ನು ಶ್ರೇಯಾ ಘೋಷಾಲ್ ಹಾಡಿದ್ದಾರೆ. ಮತ್ತು ಈ ಹಾಡಿನಲ್ಲಿ ರಿತು ವರ್ಮ ಹಲವಾರು ನೃತ್ಯಗಾರರೊಂದಿಗೆ ಕಾಣಿಸಿಕೊಂಡಿದ್ದಾರೆ. ಈಗ ಇತ್ತೀಚಿನ ವರದಿಯ ಪ್ರಕಾರ ಮಹಿಳಾ ಮೋರ್ಚಾ ಸದಸ್ಯರು ಈ ಚಿತ್ರದ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ‘ಡಿಗು ಡಿಗು ಡಿಗು ನಾಗಾ’ ಹಾಡು ಹಿಂದೂ ಧರ್ಮವನ್ನು ಕೀಳಾಗಿಸಿದೆ. ಇದು ಹಿಂದೂ ಧರ್ಮದ ಹಿತಾಸಕ್ತಿಗೆ ವಿರುದ್ಧವಾಗಿದೆ. ಮತ್ತು ಇದರಲ್ಲಿ ಜನರ ನಂಬಿಕೆಗಳನ್ನು ಕೀಳಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಈ ಹಾಡಿನ ಗೀತರಚನೆಕಾರ ಅನಂತ್ ಶ್ರೀರಾಮ್ ವಿರುದ್ಧ ಚಿಲ್ಲಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ರಿಮೇಕ್ ಜಾನಪದ ಹಾಡು ‘ಡಿಗು ಡಿಗು ಡಿಗು ನಾಗಾ’ ಹಾಡನ್ನು ವಿಶಾಲ್ ಚಂದ್ರಶೇಖರ್ ಸಂಯೋಜಿಸಿದ್ದಾರೆ. ನೃತ್ಯ ಸಂಯೋಜನೆಯನ್ನು ನೃತ್ಯ ನಿರ್ದೇಶಕ ಶೇಖರ್ ಮಾಸ್ಟರ್ ಮಾಡಿದ್ದಾರೆ. ಈ ಚಿತ್ರವನ್ನು ಲಕ್ಷ್ಮಿಸೌಜನ್ಯ ನಿರ್ದೇಶಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button