ಮನರಂಜನೆಸಿನಿಮಾ

ಪ್ರಭಾಸ್ ರನ್ನು ಮದುವೆಯಾಗುತ್ತೇನೆ ಎಂದ ನಟಿ

ಕೃತಿ ಸನೋನ್ ಭಾರತೀಯ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ಚಿತ್ರರಂಗದಲ್ಲಿ ತನ್ನದೇ ಆದ ಚಾಪು ಮೂಡಿಸಿದ್ದಾರೆ. ಅವರು ಯಾವುದೇ ಪಾತ್ರದಲ್ಲಿ ನಟಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದಾಗಿನಿಂದ ರಾಷ್ಟದಲ್ಲಿ ಖ್ಯಾತ ನಟಿ ಎನಿಸಿಕೊಂಡಿದ್ದಾರೆ.

ಪ್ರಸ್ತುತ ಅವರು ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಆದಿಪುರುಷ’ದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಅವರು ಪ್ರಭಾಸ್ ಗೆ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಚಿತ್ರೀಕರಣ ನಡೆಯುತ್ತಿದೆ.

ಇತ್ತೀಚೆಗೆ ನಟಿ ಕೃತಿ ಸನೋನ್ ಅವರು ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು. ಆ ವೇಳೆ ಅವರಿಗೆ ನಟ ಪ್ರಭಾಸ್, ಟೈಗರ್ ಶ್ರಾಫ್ ಮತ್ತು ಕಾರ್ತಿಕ್ ಆರ್ಯನ್ ಅವರಲ್ಲಿ ಯಾರ ಜೊತೆ ಮದುವೆಯಾಗಲು, ಡೇಟಿಂಗ್ ಮಾಡಲು, ಚೆಲ್ಲಾಟವಾಡಲು ಇಷ್ಟ ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ನಟಿ ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡಲು, ಕಾರ್ತಿಕ್ ಆರ್ಯನ್ ಜೊತೆ ಚೆಲ್ಲಾಟವಾಡಲು ಮತ್ತು ಪ್ರಭಾಸ್ ಜೊತೆ ಮದುವೆಯಾಗಲು ಇಷ್ಟ ಎಂಬುದಾಗಿ ತಿಳಿಸಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button