ಮನರಂಜನೆಸಿನಿಮಾಸೆಲೆಬ್ರಿಟಿ
Katrina Kaif: ಶೂಟಿಂಗ್ ಬ್ರೇಕ್ ತೆಗೆದುಕೊಂಡ ನಟಿ ಕತ್ರೀನಾ ಹೋಗಿದ್ದೆಲ್ಲಿಗೆ ಗೊತ್ತಾ?

ಬಾಲಿವುಡ್ ನಟಿ ಕತ್ರೀನಾ ಕೈಫ್ ಅವರು ಟೈಗರ್ 3 ಚಿತ್ರೀಕರಣದ ಸಮಯದಲ್ಲಿ ವಿರಾಮ ಪಡೆದುಕೊಂಡು ದಿನಸಿ ಶಾಪಿಂಗ್ ಮಾಡಲು ತೆರಳಿದ್ದಾರೆ. ಸೂಪರ್ ಮಾರ್ಕೆಟ್ ನಿಂದ ತನ್ನ ವಿಡಿಯೋವನ್ನು ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಕತ್ರೀನಾ ಕೈಫ್ ಅವರು ಮನೀಶ್ ಶರ್ಮಾ ನಿರ್ದೇಶಿಸುತ್ತಿರುವ ಟೈಗರ್ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದೆ. ಈ ಸಮಯದಲ್ಲಿ ಬೇಸರಗೊಂಡ ನಟಿ ಶೂಟಿಂಗ್ ಬ್ರೇಕ್ ತೆಗೆದುಕೊಂಡು ದಿನಸಿ ಸಾಮಾಗ್ರಿ ಖರೀದಿಗೆ ತೆರಳಿದ್ದಾರೆ.
ಕತ್ರೀನಾ ಕೈಫ್ ಅವರಿಗೆ ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆಗೆ ಟರ್ಕಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಮೆಹ್ಮೆತ್ ನೂರಿ ಎರ್ಸೊಯ್ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಕತ್ರೀನಾ ಕೈಫ್ ಅವರಿಗೆ ಟರ್ಕಿ ತುಂಬಾ ಇಷ್ಟವಾಗಿದ್ದು, ಹೀಗಾಗಿ ತಮ್ಮ ಚಿತ್ರಗಳನ್ನು ಟರ್ಕಿ ರಾಷ್ಟ್ರಧ್ವಜದೊಂದಿಗೆ ಶೀರ್ಷಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ




