ಮನರಂಜನೆಸಿನಿಮಾಸೆಲೆಬ್ರಿಟಿ
ಕರಿಷ್ಮಾ ಕಪೂರ್ ಗೆ ಮರೆಯಲಾಗದ ಉಡುಗೊರೆ ನೀಡಿದ ಸೈಫ್ ಅಲಿ ಖಾನ್

ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ನಟಿ ಕರಿಷ್ಮಾ ಕಪೂರ್ ಅವರಿಗೆ ಉಡುಗೊರೆಯೊಂದನ್ನು ನೀಡಿದ್ದು, ಇದಕ್ಕೆ ನಟಿ ಕರಿಷ್ಮಾ ಕಪೂರ್ ಅವರು, ಸೈಫ್ ಅಲಿ ಖಾನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಸೈಫ್ ಅಲಿ ಖಾನ್ ನಟಿ ಕರಿಷ್ಮಾ ಅವರು ತನ್ನ ಸಹೋದರಿ ಕರೀನಾ ಅವರ ಜೊತೆಗಿರುವ ತುಂಬಾ ಹಿಂದಿನ ದಿನಗಳ ಫೋಟೊವೊಂದನ್ನು ಸುಂದರವಾಗಿ ಫ್ರೇಮ್ ಮಾಡಿ ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊವನ್ನು ನಟಿ ಕರೀಷ್ಮಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು ಶೈಪ್ ಅಲಿ ಖಾನ್ ಗೆ ಧನ್ಯವಾದ ತಿಳಿಸಿದ್ದಾರೆ.
ಈ ಫೋಟೊ ಬ್ಲ್ಯಾಕ್ ಆ್ಯಂಡ್ ವೈಟ್ ಆಗಿದ್ದು, ಅದರಲ್ಲಿ ಕರೀಷ್ಮಾ ಮತ್ತು ಕರೀನಾ ಸಿಡಿಗಳು ಮತ್ತು ಇತರ ಲೇಖನ ಸಾಮಾಗ್ರಿಗಳ ನಡುವೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇದರಲ್ಲಿ ಇಬ್ಬರು ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಆ ಅದ್ಭುತವಾದ ದಿನವನ್ನು ನೆನಪು ಮಾಡಿದ್ದಕ್ಕೆ ನಟಿ ಕರೀಷ್ಮಾ ಸಂತಸಗೊಂಡು ಧನ್ಯವಾದ ತಿಳಿಸಿದ್ದಾರೆ.




