Breaking NewsLatestರಾಜಕೀಯರಾಷ್ಟ್ರೀಯ
ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾಣ

ಗಾಂಧಿನಗರ: ಗುಜರಾತ್ ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಪ್ರಮಾನವಚನ ಸ್ವೀಕರಿಸಿದರು.
ಗವರ್ನರ್ ಆಚಾರ್ಯ ದೇವವ್ರತ ಪ್ರಮಾಣವಚನ ಬೋಧಿಸಿದರು.
ಪ್ರಮಾಣವಚನ ಸಮಾರಂಭದಲ್ಲಿ ಕೆಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಲ್ವರು ಬಿಜೆಪಿ ಮುಖ್ಯಮಂತ್ರಿಗಳು ಅಲ್ಲದೆ ಪ್ರಹ್ಲಾದ್ ಜೊಶಿ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.
ಭೂಪೇಂದ್ರ ಪಟೇಲ್ ಗುಜರಾತ್ನ 17ನೇ ಮುಖ್ಯಮಂತ್ರಿಯಾಗಿದ್ದಾರೆ.
ವಿಜಯ್ ರೂಪಾನಿ ರಾಜೀನಾಮೆ ಬಳಿಕ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಬ್ಬರ ಆಯ್ಕೆಯಾಗಿರುವ 59 ವರ್ಷದ ಭೂಪೆಂದ್ರ ಪಟೇಲ್ ಮೊದಲ ಬಾರಿಗೆ ಶಾಸಕರಾಗಿ ಘತ್ಲೋಡಿಯ ಕ್ಷೇತ್ರದಿಂದ ಆಯ್ಕೆಯಾದವರು. ಮಾಜಿ ಸಿಎಂ ಆನಂದಿಬೆನ್ ಪಟೇಲ್ ಅವರ ಆಪ್ತರಾಗಿರುವ ಭೂಪೇಂದ್ರ ಪಟೇಲ್, ಆನಂದಿಬೆನ್ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದಲೇ ಆರಿಸಿ ಬಂದಿರುವವರು.
