Sonu Sood: ಬೆಂಗಳೂರಿನಲ್ಲಿ ಆಕ್ಸಿಜನ್ ಪೂರೈಕೆ ಕಾರ್ಯದಲ್ಲಿ ತೊಡಗಿದ ನಟ ಸೋನು ಸೂದ್

ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಕಷ್ಟದಲ್ಲಿ ಸಿಲುಕಿದ ಜನರಿಗೆ ಸಹಾಯ ಮಾಡಿ ನಿಜವಾದ ಹೀರೋ ಎನಿಸಿಕೊಂಡ ನಟ ಸೋನು ಸೂದ್ ಅವರು, ಮತ್ತೆ ಈಗ ಆಕ್ಸಿಜನ್ ಪೂರೈಕೆ ಕಾರ್ಯಗಳಲ್ಲಿ ತೊಡಗಿದ್ದಾರೆ. ಈ ಕೆಲಸಕ್ಕಾಗಿ ಅವರು ಉದ್ಯಮಿ ಹೊತ್ತೂರು ಶಾದಾಬ್ ವಹಾಬ್ ಜೊತೆ ಸಹಕರಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದವರನ್ನು ಮೇಲೆತ್ತುವ ಗುರಿಯನ್ನು ಹೊಂದಿರುವ ಹೊತ್ತೂರು ಫೌಂಡೇಶನ್ ಇತ್ತೀಚೆಗೆ ಆಮ್ಲಜನಕ ಪೂರೈಕೆಯನ್ನು ಒದಗಿಸುವ ಮೂಲಕ ಸೋನು ಸೂದ್ ಅವರ ಸೂದ್ ಚಾರಿಟಿ ಫೌಂಡೇಶನ್ ನೊಂದಿಗೆ ಸಹಕರಿಸಿತು. ಇವರಿಬ್ಬರು ಸೇರಿ ನಗರದಲ್ಲಿ ಆಕ್ಸಿಜನ್ ಸಪ್ಲೈ ಡ್ರೈವ್ ನಡೆಸಿದ್ದಾರೆ. ಇದರಿಂದ ಸಾವಿರಾರು ಜನರಿಗೆ ಆಕ್ಸಿಜನ್ ಸಿಗಲಿದೆ.
ಕೊರೊನಾ ರೋಗಿಗಳಿಗೆ ಇದರಿಂದ ಸಹಕಾರವಾಗಲಿದೆ. ಕೊರೊನಾ ಸಮಯದಲ್ಲಿ ಆಕ್ಸಿಜನ್ ಪೂರೈಕೆ ಮಾಡುವುದು ಒಂದು ಉತ್ತಮ ಕೆಲಸ. ಹಾಗಾಗಿ ಇದನ್ನು ಸ್ಥಾಪಿಸಿರುವುದಾಗಿ ಉದ್ಯಮಿ ಹೊತ್ತೂರು ಶಾದಾಬ್ ವಹಾಬ್ ತಿಳಿಸಿದ್ದಾರೆ. ಮತ್ತು ಈ ಮೂಲಕ ನನ್ನ ದೇಶವಾಸಿಗಳಿಗೆ ಸಹಾಯ ಮಾಡಲು ನನಗೆ ತುಂಬಾ ಖುಷಿ ನೀಡುತ್ತದೆ ಎಂದು ನಟ ಸೂದ್ ಸೂದ್ ಹೇಳಿದ್ದಾರೆ




