ಜಿಲ್ಲಾ ಸುದ್ದಿಬೆಳಗಾವಿ
Teachers Day : ಶಿಕ್ಷಕರ ದಿನಾಚರಣೆಗೆ ಕಾಡಿದ ಮುಖ್ಯಮಂತ್ರಿ ಆದೇಶ: ಸರಳವಾಗಿ ನಡೆದ ಕಾರ್ಯಕ್ರಮ

ಬೆಳಗಾವಿ : ಇಂದು ರಾಷ್ಟ್ರಾದ್ಯಂತ ಶಿಕ್ಷಕರ ದಿನಾಚರಣೆ ಆಗಿದ್ದರಿಂದ ಎಲ್ಲಡೆ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮ ಜೋರಾಗಿ ನಡೆಯುತ್ತಿವೆ. ಡಾ ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ ನಿಮಿತ್ಯ ಅಥಣಿ ಪಟ್ಟಣದಲ್ಲಿ ಶಿಕ್ಷಕ ದಿನಾಚರಣೆಯನ್ನ ಇಂದು ಹಮ್ಮಿಕೊಳ್ಳಲಾಗಿತ್ತು ಪತ್ರಕರ್ತರು ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದಂತೆ ಶಿಕ್ಷಕರಿಗೆ ಸರ್ಕಾರದ ಸುತ್ತೋಲೆ ನೆನಪಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಕಾರ್ಯಕ್ರಮಕ್ಕೆ ಎಂದು ಗುಲಾಬಿಗಳನ್ನು ಖರೀದಿ ಮಾಡಿದ್ದ ಆಯೋಜಕರು ಅಧಿಕಾರಿಗಳು ಕೊಡಲು ಹಿಂದೇಟು ಹಾಕಿ ಸುಮ್ಮನಾಗಿದ್ದಾರೆ, ನಂತರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದವರಿಗೆ ಪುಸ್ತಕ ವಿತರಣೆ ಮೂಲಕ ಸ್ವಾಗತ ಕೋರಿ ಸ್ವಾಗತ ಕಾರ್ಯಕ್ರಮಕ್ಕೆ ತಂದಿದ್ದ ನೂರಾರು ಗುಲಾಬಿ ಹೂಗಳು ವ್ಯರ್ಥಮಾಡಿದ್ದಾರೆ.
ಶಿಕ್ಷಕರ ದಿನಾಚರಣೆಗೆ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಸಹಿತ ಇತರ ವ್ಯಕ್ತಿಗಳು ಉಪಸ್ಥಿತರಿದ್ದರು.




