ಮನರಂಜನೆಸಿನಿಮಾಸೆಲೆಬ್ರಿಟಿ

ಜ್ಯೋತಿಷ್ಯದ ಬಗ್ಗೆ ನಂಬಿಕೆಯಿಲ್ಲ ಎಂದ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ

ಬಾಲಿವುಡ್ ನಟರಲ್ಲಿ ಒಬ್ಬರಾದ ನವಾಜುದ್ದೀನ್ ಸಿದ್ದಿಕಿ ಅವರು ಕಠಿಣ ಪರಿಶ್ರಮದಿಂದ ಬಾಲಿವುಡ್ ನಲ್ಲಿ ನೆಲೆಕಂಡುಕೊಂಡಿದ್ದಾರೆ. ಹಾಗಾಗಿ ಇವರು ಯಾವಾಗಲೂ ಕಠಿಣ ಪರಿಶ್ರಮದಲ್ಲಿ ದೃಢವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಆದಕಾರಣ ಜ್ಯೋತಿಷ್ಯಶಾಸ್ತ್ರವನ್ನು ಅವರು ದ್ವೇಷಿಸುತ್ತಾರಂತೆ.

ಈ ಬಗ್ಗೆ ಮಾತನಾಡುವಾಗ ನಟ ನವಾಜುದ್ದೀನ್ ಸಿದ್ದಿಕಿ ಅವರು, ಜ್ಯೋತಿಷ್ಯವನ್ನು ಅತಿಯಾಗಿ ನಂಬುವಂತಹ ಜನರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜನರು ಅದೃಷ್ಟವನ್ನು ನಂಬುವ ಬದಲು ತಮ್ಮ ಮೆದುಳನ್ನು ಬಳಸಬೇಕು. ತಮ್ಮ ಗುರಿಯತ್ತ ಸಾಗಲು ಹೆಚ್ಚು ಶ್ರಮಿಸಬೇಕು ಎಂದು ತಿಳಿಸಿದ್ದಾರೆ.

ಹಾಗೇ ಅವರು ಜ್ಯೋತಿಷ್ಯವನ್ನು ನಂಬುವುದಿಲ್ಲ. ಹಾಗಾಗಿ ನಾನು ಯಾವುದೇ ಬಳೆ, ಉಂಗುರವನ್ನು ಧರಿಸಿಲ್ಲ ಎಂದಿದ್ದಾರೆ. ಅಲ್ಲದೇ ತಮ್ಮ ಅದೃಷ್ಟದಲ್ಲಿ ಬದಲಾವಣೆಯನ್ನು ತರಲು ತಮ್ಮ ಹೆಸರನ್ನು ಬದಲಾಯಿಸುವ ಸಿನಿಮಾ ತಾರೆಯರ ಬಗ್ಗೆ ಅವರು ಆಶ್ವರ್ಯವನ್ನು ವ್ಯಕ್ತಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button