Breaking Newsಮನರಂಜನೆಸೆಲೆಬ್ರಿಟಿ

ನಾಸಿರುದ್ಧಿನ್ ಶಾ ಆರೋಗ್ಯದಲ್ಲಿ ಚೇತರಿಕೆ!

ಬಾಲಿವುಡ್ ನ ಖ್ಯಾತ ನಟ ನಾಸಿರುದ್ಧಿನ್ ಶಾ ಆರೋಗ್ಯದಲ್ಲಿ ಗಣನೀಯ ಚೇತರಿಕೆ ಕಂಡುಬಂದಿದ್ದು, ಅವರೀಗ ಆರೋಗ್ಯವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಶಾ, ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು, ಸ್ವಾಶಕೋಶದಲ್ಲಿ ಸಣ್ಣ ಮಟ್ಟದ ತೊಂದರೆ ಉಂಟಾಗಿದ್ದು, ಸಣ್ಣದೊಂದು ಪ್ಯಾಚ್ ಪತ್ತೆಯಾಗಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಿಸುತ್ತಿರುವುದಾಗಿಯೂ, ಅವರೀಗ ಚೆನ್ನಾಗಿ ಚೇತರಿಸಿಕೊಂಡಿದ್ದಾರೆ ಎಂದು ನಾಸಿರುದ್ಧಿನ್ ಪತ್ನಿ ರತ್ನ ಪಾಠಕ್ ತಿಳಿಸಿದ್ದಾರೆ!

ಮೊದಲು ಈ ಸುದ್ದಿಯನ್ನು ಕುಟುಂಬ ನಿರಾಕರಿಸಿತ್ತು!

ವರ್ಷದ ಹಿಂದೆ ನಾಸಿರುದ್ಧಿನ್ ಶಾ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾರೆ ಎಂಬ ಸುದ್ದಿಯನ್ನು ಮಗ ವಿಹಾನ್ ಶಾ ನಿರಾಕರಿಸಿದ್ದು, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ರೇಗಾಡಿದ್ದರು. ವಾರದ ಹಿಂದೆ ಮತ್ತೆ ಸುದ್ದಿಯಾದಾಗ ಅದು ನಿಜ. ನ್ಯುಮೋನಿಯಾ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಒಪ್ಪಿದ್ದ ಕುಟುಂಬ, ಇದೀಗ ಶಾ ಆರೋಗ್ಯ ಚೇತರಿಕೆಯ ಬಗ್ಗೆ ಗುಡ್ ನ್ಯೂಸ್ ಕೊಟ್ಟಿದೆ. ಸದ್ಯದಲ್ಲೇ ಡಿಸ್ ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button