ಬ್ರಿಟನ್ ನಟನ ಜೊತೆ ಆ್ಯಮಿ ಜಾಕ್ಸನ್ ಡೇಟಿಂಗ್

ಭಾರತೀಯ ಚಿತ್ರರಂಗದ ಬೇಡಿಕೆಯ ನಟಿ ಆ್ಯಮಿ ಜಾಕ್ಸನ್. ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್ ಚಿತ್ರದಲ್ಲಿ ಸುದೀಪ್ಗೆ ಜೋಡಿಯಾಗಿ ನಟಿಸಿ ಕನ್ನಡಿಗರ ಮನಸ್ಸು ಗೆದ್ದ ನಟಿ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ 2.0 ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದ ಆ್ಯಮಿ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ವೈಯಕ್ತಿಯ ವಿಷಯಕ್ಕೆ ಹೆಚ್ಚು ಸುದ್ದಿಯಾಗುತ್ತಿರುವ ಆ್ಯಮಿ ಇದೀಗ ಮತ್ತೊಂದು ವಿಷಯದಲ್ಲಿ ಸದ್ದು ಮಾಡ್ತಿದ್ದಾರೆ.
ದಿ ವಿಲನ್ ಸುಂದರಿ ಆ್ಯಮಿ ಉದ್ಯಮಿ ಜಾರ್ಜ್ ಪನಯೋಟ್ ಜತೆ ರಿಲೇಶನ್ಶಿಪ್ನಲ್ಲಿದ್ದರು. ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಜೋಡಿ ಸದ್ಯದಲ್ಲೇ ಮದುವೆಯೂ ಆಗ್ತಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ ಈ ಜೋಡಿಗೆ ಒಂದು ಮುದ್ದಾದ ಗಂಡು ಮಗು ಕೂಡ ಜನಿಸಿತ್ತು. ಆದರೆ ಕಳೆದ ವರ್ಷ ಕೆಲವೊಂದು ಕಾರಣದಿಂದ ಇಬ್ಬರು ಬೇರೆ ಬೇರೆಯಾಗಿದ್ದಾರೆ. ಇದೀಗ ಆ್ಯಮಿ ಮತ್ತೆ ಡೇಟಿಂಗ್ ಶುರು ಮಾಡಿಕೊಂಡಿದ್ದಾರಂತೆ.
ನಟಿ ಆ್ಯಮಿ ಜಾಕ್ಸಸ್ ಜಾರ್ಜ್ ಪನಯೋಟು ಜೊತೆಗಿರುವ ಸಾಕಷ್ಟು ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಬಳಿಕ ಇದ್ದಕ್ಕಿದ್ದ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಡಿಲೀಟ್ ಮಾಡಿದ್ದ ಆ್ಯಮಿ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದರು. ಇದೀಗ ಆ್ಯಮಿ ಬ್ರಿಟಿಷ್ ನಟನ ಜೊತೆ ಸುತ್ತಾಟ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ.
ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಆ್ಯಮಿ ಕಳೆದ ಎರಡು ತಿಂಗಳಿನಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಕಳೆದ ಡಿಸೆಂಬರ್ನಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ನಲ್ಲಿ ಆ್ಯಮಿ ಹಾಗೂ ಎಡ್ ವೆಸ್ಟ್ವಿಕ್ ಭೇಟಿ ಆಗಿದ್ದು ಆ ಬಳಿಕ ಪರಿಚಯವಾಗಿ ಡೇಟಿಂಗ್ ಶುರುಮಾಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಮಗುವಿನ ಜವಬ್ದಾರಿಯನ್ನ ಆ್ಯಮಿ ಅವರೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.




