ಮನರಂಜನೆಸಿನಿಮಾಸೆಲೆಬ್ರಿಟಿ

ಈ ಬ್ಯೂಟಿಯ ಆಕ್ಷನ್ ಸೀನ್​ಗೆ ಫಿದಾ ಆದ ಆಲಿಯಾ ಭಟ್

ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಲಿಯಾ ಭಟ್ ಒಂದರ ಹಿಂದೊದರಂತೆ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಬಿಟೌನ್ ಜೊತೆಗೆ ಟಾಲಿವುಡ್​ನಲ್ಲೂ ಅವಕಾಶ ಗಿಟ್ಟಿಸಿಕೊಂಡಿರೋ ಚೆಲುವೆ ಇದೀಗ ತಮ್ಮ ಮನದ ಇಂಗಿತವೊಂದನ್ನ ತೋಡಿಕೊಂಡಿದ್ದಾರೆ.

ಆಲಿಯಾ ಭಟ್ ನಟನೆಯ ಆರ್ ಆರ್ ಆರ್ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದೇ ಮಾರ್ಚ್ 25ರಂದು ಸಿನಿಮಾ ತೆರೆಗೆ ಬರ್ತಿದ್ದು, ಚಿತ್ರ ನೋಡೋಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಬಿಟೌನ್ ಬ್ಯೂಟಿಯ ಟಾಲಿವುಡ್ ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ. ಆದರೆ ಅದಕ್ಕೂ ಮೊದಲೇ ಆಲಿಯಾಗೆ ತೆಲುಗು ಚಿತ್ರರಂಗದಿಂದ ಸಾಕಷ್ಟು ಆಫರ್​ಗಳು ಬರ್ತಿವೆಯಂತೆ.

ಅಂದ್ಹಾಗೆ ಆಲಿಯಾ ಇತ್ತೀಚೆಗೆ ಪುಷ್ಪ ಸಿನಿಮಾ ನೋಡಿ ಫುಲ್ ಫಿದಾ ಆಗಿ ಬಿಟ್ಟಿದ್ರು. ಹೀಗಾಗಿ ಟಾಲಿವುಡ್ ಸ್ಟೈಲ್ ಕಿಂಗ್ ಅಲ್ಲು ಅರ್ಜುನ್ ಜೊತೆ ನಟಿಸ್ಬೇಕು ಎಂದು ತಮ್ಮ ಮನದ ಆಸೆಯನ್ನ ತೋಡಿಕೊಂಡಿದ್ರು.

ಇದೀಗ ಆಲಿಯಾ ಸಮಂತ ಜೊತೆ ಸ್ಕ್ರೀನ್ ಶೇರ್ ಮಾಡ್ಬೇಕು ಎಂದಿದ್ದಾರೆ. ಸಮಂತ ನಟನೆಯ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್​ನಲ್ಲಿ ಸಮಂತ್ ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಆಕ್ಷನ್ ಸೀನ್​ಗಳಲ್ಲೂ ಸಮಂತ ಮಿಂಚಿದ್ದಾರೆ. ಸಮಂತ ಅವರ ನಟನೆ ನೋಡಿ ಮೆಚ್ಚಿಕೊಂಡಿರೋ ಆಲಿಯಾ ಸಮಂತ ಜೊತೆ ಆಕ್ಷನ್ ದೃಶ್ಯಗಳಲ್ಲಿ ನಟಿಸ್ಬೇಕು ಎಂದಿದ್ದಾರೆ.

ಸಮಂತಾ ಜೊತೆ ನಟಿಸಬೇಕು ಎನ್ನುವ ಆಸೆ ಇದೆ. ಅದು ಆಕ್ಷನ್ ಸಿನಿಮಾ ಅದರೆ ಇನ್ನೂ ಉತ್ತಮ. ಆ ರೀತಿಯ ಅವಕಾಶ ಕೂಡಿ ಬಂದರೆ ಖಂಡಿತವಾಗಿಯೂ ನಟಿಸುತ್ತೇನೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.

ಸಾಮಾನ್ಯವಾಗಿ ನಟಿಯರು ಇತರ ನಟಿಯರ ಜೊತೆ ನಟಿಸ್ಬೇಕು ಅನ್ನೋದು ಕಡಿಮೆ. ಆದ್ರೆ ಆಲಿಯಾ ಮಾತು ಕೇಳಿ ಆಲಿಯಾ ಅಭಿಮಾನಿಗಳ ಜೊತೆ ಸಮಂತಾ ಅಭಿಮಾನಿಗಳು ಖುಷಿಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button