ತನ್ನ ರೋಲ್ಸ್ ರಾಯ್ಸ್ ಕಾರಿಗೆ ಸಂಪೂರ್ಣ ಪ್ರವೇಶ ತೆರಿಗೆ ಪಾವತಿಸಿದ ನಟ ವಿಜಯ್
ತನ್ನ ರೋಲ್ಸ್ ರಾಯ್ಸ್ ಕಾರಿಗೆ ಸಂಪೂರ್ಣ ಪ್ರವೇಶ ತೆರಿಗೆ ಪಾವತಿಸಿದ ನಟ ವಿಜಯ್ ವಿದೇಶದಿಂದ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿ ಅದರ ಪ್ರವೇಶ ತೆರಿಗೆ ಪಾವತಿಸದೆ ಸಂಕಷ್ಟಕ್ಕೆ ಸಿಲುಕಿದ ನಟ ವಿಜಯ್ ಕೊನೆಗೂ ಆಗಸ್ಟ್ 10 ರಂದು ರೋಲ್ಸ್ ರಾಯ್ಸ್ ಕಾರಿಗೆ ಸಂಪೂರ್ಣ ಪ್ರವೇಶ ತೆರಿಗೆ ಪಾವತಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ನಟ ವಿಜಯ್ ವಿದೇಶದಿಂದ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿ ಅದರ ಪ್ರವೇಶ ತೆರಿಗೆ ಪಾವತಿಸದೆ ಕಾರಣ ಅವರ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗಿದೆ. ಅಲ್ಲಿನ ನ್ಯಾಯಾಧೀಶರು ಈ ಪ್ರಕರಣ ವಿಚಾರಣೆ ನಡೆಸಿ ತೆರಿಗೆ ವಿನಾಯಿತಿ ಕೋರಿ 1 ಲಕ್ಷ ರೂ ದಂಡವನ್ನು ವಿಧಿಸಿದ್ದರು. ಮತ್ತು ನಟನ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಇದು ನಟ ವಿಜಯ್ ಮತ್ತು ಅವರ ರೋಲ್ಸ್ ರಾಯ್ಸ್ ಕಾರಿನ ಬಗೆಗಿನ ಚರ್ಚೆಗೆ ಕಾರಣವಾಗಿದೆ.
ನ್ಯಾಯಧೀಶರು ನೀಡಿದ ಕಠಿಣ ಹೇಳಿಕೆಯ ವಿರುದ್ಧ ವಿಜಯ್ ಮೇಲ್ಮನವಿ ಸಲ್ಲಿಸಿದ್ದಾರೆ ಮತ್ತು ಹಿಂದಿನ ಹೇಳಿಕೆಗೆ ತಡೆಯಾಜ್ಞೆ ಯನ್ನು ತಂದರು. ಈ ಪ್ರಕರಣವನ್ನು ಆಲಿಸದ ಎರಡನೇ ನ್ಯಾಯಮೂರ್ತಿಗಳು ಕಾರಿಗೆ ಸಂಪೂರ್ಣ ತೆರಿಗೆ ಪಾವತಿಸುವಂತೆ ಆದೇಶಿಸಿದ್ದಾರೆ. ವಿಜಯ್ ಇದಕ್ಕೆ ಒಪ್ಪಿಕೊಂಡು ಇದೀಗ ಸಂಪೂರ್ಣ ತೆರಿಗೆ ಪಾವತಿಸಿದ್ದಾರೆ ಎನ್ನಲಾಗಿದೆ.




