ಮನರಂಜನೆಸಿನಿಮಾಸೆಲೆಬ್ರಿಟಿಸ್ಯಾಂಡಲ್ ವುಡ್

ಓಲ್ಡ್ ಮಂಕ್ ಮೆಚ್ಚಿಕೊಂಡ ನಟಿ ರಮ್ಯಾ: ಶ್ರೀನಿ ಸಿನಿ ಪಯಣ ಮೆಲುಕು ಹಾಕಿದ ನಟಿ

ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಮತ್ತೆ ಚಿತ್ರರಂಗದತ್ತ ಮರಳೋದಾಗಿ ತಿಳಿಸಿದ್ದಾರೆ. ಸಾಕಷ್ಟು ಸಮಯದಿಂದ ಸಿನಿಮಾ ರಂಗದಿಂದ ಬ್ರೇಕ್ ಪಡೆದುಕೊಂಡಿದ್ದ ರಮ್ಯಾ ಮತ್ತೆ ಕಂಬ್ಯಾಕ್ ಮಾಡ್ತಿರೋ ವಿಚಾರ ತಿಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಿನಿಮಾ ರಂಗದಿಂದ ದೂರವಿದ್ರು ಸಿನಿಮಾದ ಕುರಿತಾದ ಸಾಕಷ್ಟು ವಿಷಯಗಳನ್ನ ಸೋಷಿಯಲ್ ಮೀಡಿಯಾ ಮೂಲಕ ರಮ್ಯಾ ಹಂಚಿಕೊಳ್ತಿದ್ರು. ಉತ್ತಮ ಸಿನಿಮಾಗಳು ಬಂದಾಗ ಬೆನ್ನು ತಟ್ಟುತ್ತಿದ್ದ ರಮ್ಯಾ ಇದೀಗ ಸ್ಯಾಂಡಲ್ ವುಡ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಓಲ್ಡ್ ಮಂಕ್ ಚಿತ್ರವನ್ನ ಹೊಗಳಿದ್ದಾರೆ.

ಶ್ರೀನಿ ಹಾಗೂ ಅಧಿತಿ ಪ್ರಭುದೇವ್ ನಟನೆಯ ಓಲ್ಡ್ ಮಂಕ್ ಸಿನಿಮಾ ಇತ್ತಿಚೆಗಷ್ಟೇ ರಿಲೀಸ್ ಆಗಿದ್ದು ಉತ್ತಮ ಪ್ರದರ್ಶನ ಕಾಣ್ತಿದೆ. ಶ್ರೀನಿಯ ನಟನೆ ಹಾಗೂ ನಿರ್ದೇಶನಕ್ಕೆ ಫುಲ್ ಮಾಕ್ಸ್ ಸಿಕ್ಕಿದ್ದು ಪ್ರತಿಯೊಬ್ಬರು ಸಿನಿಮಾವನ್ನ ಮೆಚ್ಚಿಕೊಂಡಿದ್ದಾರೆ. ಈ ಮದ್ಯೆ ಸಿನಿಮಾ ನೋಡಿದ ರಮ್ಯಾ ಚಿತ್ರವನ್ನ ಇಷ್ಟಪಟ್ಟಿದ್ದು ಈ ಬಗ್ಗೆ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಶ್ರೀನಿ ಸುದೀಪ್ ಹಾಗೂ ರಮ್ಯಾ ನಟನೆಯ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದಲ್ಲಿ ರಮ್ಯಾ ಸಹೋದರನಾಗಿ ಬಣ್ಣ ಹಚ್ಚಿದ್ದರು. ಅದನ್ನ ನೆನಪಿಸಿಕೊಂಡ ರಮ್ಯಾ, ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ನನ್ನ ಸಹೋದರನಾಗಿ ಬಣ್ಣ ಹಚ್ಚಿದ್ದರಿಂದ ನಾಯಕ, ನಿರ್ದೇಶಕನಾಗಿ ಗುರುತಿಸಿಕೊಳ್ಳುವ ತನಕ ಸುದೀರ್ಘ ಹಾದಿಯಲ್ಲಿ ನೀವು ನಡೆದಿದ್ದೀರಿ, ನಿಮ್ಮ ಈ ಪಯಣ ಖುಷಿ ಕೊಡುತ್ತದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.

‘ಓಲ್ಡ್ ಮಾಂಕ್’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಧನ್ಯವಾದ ಹೇಳಿದ ನಟಿ ರಮ್ಯಾ  `ನಾನು ಚಿತ್ರವನ್ನು ಎಂಜಾಯ್ ಮಾಡಿದೆ. ನೀವೂ ನೋಡಿ, ನಗು ಗ್ಯಾರಂಟಿ’ ಎಂದು ಬರೆದಿದ್ದಾರೆ. ರಮ್ಯಾ ಮಾತಿಗೆ ಪ್ರತಿಕ್ರಿಯಿಸಿರುವ ಶ್ರೀನಿ, ಧನ್ಯವಾದ ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button