ತೂಕ ಇಳಿಸಿಕೊಂಡ ನಟಿ ಖುಷ್ಬೂ !

ನಟಿ, ರಾಜಕಾರಣಿ ಖುಷ್ಬೂ ಅವರು ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೀವನದ ತುಣುಕುಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆಕೆಯ ಕುಟುಂಬ, ಸಾಕುಪ್ರಾಣಿಗಳು, ತೋಟಗಾರಿಕೆ ಅಥವಾ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಲೇ ಇರುತ್ತಾರೆ. ಅದರಂತೆ ಇತ್ತೀಚೆಗೆ ನಟಿ ಖುಷ್ಬೂ ಅವರು ತನ್ನ ತೂಕ ಇಳಿಕೆಯ ಬಗ್ಗೆ ಮಾತನಾಡಿದ್ದಾರೆ.
ನಟಿ ಖುಷ್ಬೂ ತಾನು ಸಾಕಷ್ಟು ತೂಕ ಕಳೆದುಕೊಂಡಿರುವುದಾಗಿ ತೋರಿಸಲು ಇತ್ತೀಚಿನ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಕಠಿಣ ಪರಿಶ್ರಮದಿಂದ ಅಂತಿಮವಾಗಿ ಉತ್ತಮ ಫಲಿತಾಂಶ ಸಿಕ್ಕಿದೆ ಎಂಬುದಾಗಿ ತಿಳಿಸಿದ್ದಾರೆ. ಅವರು ಪ್ರತಿದಿನ 2 ಗಂಟೆಗಳ ಕಾಲ ವರ್ಕೌಟ್ ಮಾಡುತ್ತಿದ್ದಾರೆ ಮತ್ತು ಆಹಾರದ ಬಗ್ಗೆ ನಿಯಂತ್ರಣವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ನಟಿ ಖುಷ್ಬೂ ಅವರು ರಜನೀಕಾಂತ್ ಅವರ ‘ಅಣ್ಣಥೆ ‘ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿರುತೈ ಶಿವ ನಿರ್ದೇಶನದ ಈ ಚಿತ್ರದಲ್ಲಿ ಮೀನಾ, ನಯನತಾರಾ ಮತ್ತು ಕೀರ್ತಿ ಸುರೇಶ್ ಕೂಡ ಇದ್ದಾರೆ. ಈ ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಹಾಗಾಗಿ ಇದೀಗ ನಟಿ ಖುಷ್ಬೂ ಅವರು ಕಿರುತೆರೆಗೆ ಸೇರಿಕೊಂಡಿದ್ದಾರೆ.




