ಮನರಂಜನೆಸಿನಿಮಾಸೆಲೆಬ್ರಿಟಿ

ಅದ್ದೂರಿಯಾಗಿ ನಡೆಯಿತು ಅಮೂಲ್ಯ ಸೀಮಂತ ಶಾಸ್ತ್ರ

ಅಮೂಲ್ಯ ಸೀಮಂತ ಶಾಸ್ತ್ರದ ಪೋಟೋ

ಸ್ಯಾಂಡಲ್ ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ತಾವು ಪ್ರೆಗ್ನೆಂಟ್ ಎಂದು ಪೋಟೋದ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ಕುಟುಂಬ ಸದಸ್ಯರು ಸೀಮಂತದ ಶಾಸ್ತ್ರ ಮಾಡಿದ್ದು ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹಸಿರಿನ ಥೀಮ್​​ನಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಹೂಗಳಿಂದ ಗಿಳಿಗಳನ್ನ ಸಖತ್ ಆಗಿ ಅಲಂಕಾರ ಮಾಡಿ ಅವುಗಳ ಮದ್ಯದಲ್ಲಿ ಸೀಮಂತ ಶಾಸ್ತ್ರ ನೆರವೇರಿಸಲಾಗಿದೆ. ಪತಿ ಜಗದೀಶ್ ಜೊತೆ ಇರುವ ವಿಶೇಷ ಫೋಟೋವನ್ನ ಹಂಚಿಕೊಂಡ ಅಮೂಲ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.

ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಮೂಲ್ಯ ನಾಯಕಿಯಾಗಿ ಬಣ್ಣ ಹಚ್ಚಿದ್ದು ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ. ಗಣೇಶ್, ಯಶ್, ಲವ್ಲಿ ಸ್ಟಾರ್ ಪ್ರೇಮ್, ದುನಿಯಾ ವಿಜಯ್, ಕೃಷ್ಣ ಅಜಯ್ ರಾವ್ ಸೇರಿದಂತೆ ಕೆಲ ಸ್ಟಾರ್ ನಟರಿಗೆ ನಾಯಕಿಯಾಗಿ ಬಣ್ಣ ಹಚ್ಚಿದ ಅಮೂಲ್ಯ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ್ದರು. ಮದುವೆಯ ಬಳಿಕ ಚಿತ್ರರಂಗದಿಂದ ದೂರ ಉಳಿದ ಅಮೂಲ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.

ಈಗ ಅಮೂಲ್ಯ ಏಳು ತಿಂಗಳ ಗರ್ಭಿಣಿಯಾಗಿದ್ದು ತವರು ಮನೆ, ಗಂಟನ ಮನೆಯ ಸದಸ್ಯರು ಹಾಗೂ ಕೆಲವು ಆಪ್ತರ ಸಮ್ಮುಖದಲ್ಲಿ ಅಮೂಲ್ಯ ಸೀಮಂತ ಕಾರ್ಯ ನೆರವೇರಿದೆ. 2017ರಲ್ಲಿ ರಾಜಕೀಯ ಹಿನ್ನೆಲೆಯ ಜಗದೀಶ್ ಜೊತೆ ಮದುವೆಯಾದ ಅಮೂಲ್ಯ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button