ಮನರಂಜನೆಸಿನಿಮಾಸೆಲೆಬ್ರಿಟಿ

Shivakarthikeya: ಸಿಂಹ ಮತ್ತು ಆನೆಯನ್ನು ಆರು ತಿಂಗಳು ದತ್ತು ಪಡೆದ ನಟ ಶಿವಕಾರ್ತಿಕೇಯನ್

ನಟ ಶಿವಕಾರ್ತಿಕೇಯನ್ ಅವರು ಸಿಂಹ ಮತ್ತು ಆನೆಯನ್ನು ಚೆನ್ನೈನ ಅರಿಂಗಾರ್ ಅಣ್ಣಾ ಮೃಗಾಲಯ ಪಾರ್ಕ್ ನಿಂದ ಆರು ತಿಂಗಳ ಅವಧಿಗೆ ದತ್ತು ತೆಗೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಪ್ರಾಣಿಶಾಸ್ತ್ರೀಯ ಉದ್ಯಾನವನವು ಮನುಷ್ಯ ಮತ್ತು ಪ್ರಾಣಿಗಳ ನಡುವೆ ನಿಕಟ ಸಂಪರ್ಕವನ್ನು ಅಭಿವೃದ್ಧಿಪಡಿಸಲು ಸಾರ್ವಜನಿಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಆಸಕ್ತಿ ಹೊಂದಿರುವವರು ಪ್ರಾಣಿಗಳನ್ನು ದತ್ತು ಪಡೆದು ಆ ಮೂಲಕ ಅವುಗಳ ನಿರ್ವಹಣೆ ಮತ್ತು ಆಹಾರಕ್ಕಾಗಿ ಹಣವನ್ನು ದಾನ ಮಾಡಬಹುದಾಗಿದೆ.

2018ರಲ್ಲಿ ಅವರು ಅನು ಎಂಬ ಹುಲಿಯನ್ನು ದತ್ತು ತೆಗೆದುಕೊಂಡು 2 ವರ್ಷಗಳ ಕಾಲ ಆಕೆಯ ಖರ್ಚುಗಳನ್ನು ನೋಡಿಕೊಂಡಿದ್ದಾರೆ. ಇದೀಗ ಅವರು ಚೆನ್ನೈನ ಅರಿಂಗಾರ್ ಅಣ್ಣಾ ಮೃಗಾಲಯ ಪಾರ್ಕ್ ನಿಂದ ವಿಷ್ಣು ಎಂಬ ಗಂಡು ಸಿಂಹ ಮತ್ತು ಪ್ರಕೃತಿ ಎಂಬ ಹೆಣ್ಣು ಆನೆಯನ್ನು ದತ್ತು ಪಡೆದುಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ

Spread the love

Related Articles

Leave a Reply

Your email address will not be published. Required fields are marked *

Back to top button