ಮನರಂಜನೆಸಿನಿಮಾಸೆಲೆಬ್ರಿಟಿ

Dhanush: ಕುಟುಂಬಕ್ಕೆ ಬಂದ ಹೊಸ ಸದಸ್ಯರನ್ನು ಪರಿಚಯಿಸಿದ ನಟ ಧನುಷ್

ಕಾಲಿವುಡ್ ನ ಖ್ಯಾತ ನಟ ಧನುಷ್ ಯಾವಾಗಲೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಆಗಾಗ ತಮ್ಮ ವೈಯಕ್ತಿಕ ಜೀವನದ ಕೆಲವು ವಿಚಾರಗಳನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದರು. ಇತ್ತೀಚೆಗೆ ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಕುಟುಂಬದ ಇಬ್ಬರು ಹೊಸ ಸದಸ್ಯರನ್ನು ಪರಿಚಯಿಸಿದ್ದಾರೆ.

ನಟ ಧನುಷ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಪುಟದಲ್ಲಿ ತಮ್ಮ ಕುಟುಂಬಕ್ಕೆ ಬಂದ ಹೊಸ ಸದಸ್ಯರಾದ ಕಿಂಗ್ ಮತ್ತು ಕಾಂಗ್ ಹೆಸರಿನ ಎರಡು ಸೈಬೀರಿಯನ್ ಹಸ್ಕಿ ನಾಯಿಮರಿಗಳನ್ನು ಅಭಿಮಾನಿಗಳಿಗೆ ಮತ್ತು ಅನುಯಾಯಿಗಳಿಗೆ ಪರಿಚಯಿಸಿದ್ದಾರೆ. ಹಾಗೇ ನಾಯಿ ಮರಿಗೆ ಸ್ವಾಗತ ಕೋರಿ ಶೀರ್ಷಿಕೆ ಹಾಕಿದ್ದಾರೆ.

ಧನುಷ್ ಅವರ ಈ ಪೋಸ್ಟ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಧನುಷ್ ತಮ್ಮ ನಾಯಿಮರಿಗಳ ಜೊತೆ ತೆಗೆದ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು, ಅನುಯಾಯಿಗಳು, ಸ್ನೇಹಿತರು, ನಟ ಧನುಷ್ ಗೆ ಶುಭ ಹಾರೈಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button