ಉಡುಪಿ
ವಿಶಾಲ ಗಾಣಿಗ ಮರ್ಡರ್ ಕೇಸ್; ಮತ್ತೋರ್ವ ಸುಪಾರಿ ಕಿಲ್ಲರ್ ಸುಳಿವು ಪತ್ತೆ

ಉಡುಪಿ: ಭಾರೀ ಸಂಚಲನ ಸೃಷ್ಟಿಸಿದ್ದ ಬ್ರಹ್ಮಾವರ ಕುಮ್ರಗೋಡಿನ ವಿಶಾಲ ಗಾಣಿಗ ಕೊಲೆ ಪ್ರಕರಣದ ಮತ್ತೋರ್ವ ಸುಪಾರಿ ಹಂತಕನ ಸುಳಿವು ಉಡುಪಿ ಪೊಲೀಸರಿಗೆ ದೊರೆತಿದೆ.ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಸುಪಾರಿ ಕಿಲ್ಲರ್ ಗಳ ಮೂಲಕ ವಿಶಾಲ ಗಾಣಿಗ (35) ಹತ್ಯೆ ಮಾಡಿಸಿದ್ದ ಪತಿ ರಾಮಕೃಷ್ಣ ಗಾಣಿಗ ನನ್ನು ಬಂಧಿಸಿದ್ದ ಪೊಲೀಸ್ ತಂಡ, ಬಳಿಕ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಒಬ್ಬ ಸುಪಾರಿ ಹಂತಕನನ್ನು ಜು. 19ರಂದು ಬಂಧಿಸಿದ್ದರು.
ಇದೀಗ ಉತ್ತರ ಪ್ರದೇಶದ ಪೊಲೀಸರ ಸಹಕಾರದೊಂದಿಗೆ ಎರಡನೇ ಸುಪಾರಿ ಹಂತಕನ ಬಂಧನಕ್ಕೆ ಬಲೆ ಬೀಸಿದ್ದು,ಇನ್ನೆರಡು ದಿನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




