ಅರೆಬರೆ ಕಾಮಗಾರಿ; ಮೂರು ದಿನದ ಮಳೆಗೆ ಮುಳುಗಿದ ಬೆಳಗಾವಿ

ಬೆಳಗಾವಿ: ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾದ ಮಳೆ ಆಗುತ್ತಿದ್ದು, ಈಗಾಗಲೇ ನದಿಗಳು ಮೈದುಂಬಿ ಹರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡಿರುವುದು ಒಂದು ಕಡೆ ಆದರೆ,ಬೆಳಗಾವಿ ನಗರ ಕೂಡಾ ಮಳೆಗೆ ನಲುಗಿ ಮುಳುಗಿ ಹೋಗಿದೆ
ತೀವ್ರ ಮಳೆಯಿಂದಾಗಿ ಮತ್ತೆ ನೆರೆ ಭೀತಿ ಬೆಳಗಾವಿ ಜನರಲ್ಲಿ ಕಾಡಿತ್ತಿದೆ. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರು ಮನೆಗೆ ನುಗ್ಗಿ, ಜನ ಜೀವನ ಅಸ್ತವ್ಯಸ್ತಗೊಂಡು ಪರದಾಡುವ ಪರಿಸ್ಥಿತಿ ಎದುರಾಗಿದೆ. ಪಾಲಿಕೆಯ ಅವೈಜ್ಞಾನಿಕ ಕಾಮಗಾರಿಗಳು ಈಗ ಈ ವರುಣಾರ್ಭಟದಿಂದಾಗಿ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ನಗರದ ಅವೈಜ್ಞಾನಿಕ ಒಳಚರಂಡಿದಿಂದಾಗಿ ಗಟಾರು ನೀರು ಮನೆಗಳಿಗೆ ನುಗ್ಗಿದೆ.
ಬೆಳಗಾವಿ ನಗರದ ಶಿವಾಜಿ ನಗರ ,ಶಿವಬಸವನಗರ ಸೇರಿದಂತೆ ಹತ್ತಾರು ಕಡೆ ಈಗಾಗಲೇ ನೀರು ನುಗ್ಗಿ ಪ್ರವಾಹ ಸಂಕಷ್ಟವನ್ನು ಕುಟುಂಬಗಳು ಎದುರಿಸುತ್ತಿವೆ.
ಇಷ್ಟೇಲ್ಲಾ ಅವಾಂತರಗಳು ಸಂಭವಿಸಿತ್ತಿದ್ದರೂ ಪಾಲಿಕೆಯ ಅಧಿಕರಿಗಳು ಮಾತ್ರ ಇನ್ನು ನಿದ್ದೆಕಣ್ಣಿನಿಂದ ಎದ್ದಿಲ್ಲ ಎಂದು ಸ್ಥಳಿಯರು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.




