ಉತ್ತರ ಕನ್ನಡಜಿಲ್ಲಾ ಸುದ್ದಿ

Gokarna Beach: ಗೋಕರ್ಣದ ಎರಡು ಬೀಚ್‌ಗಳಲ್ಲಿದೆ ಅಪಾಯಕಾರಿ ಒಳಸುಳಿಗಳು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿರುವ ಓಂ ಬೀಚ್ ಹಾಗೂ ಮುಖ್ಯ ಕಡಲತೀರಗಳು ಅಪಾಯಕಾರಿ ಬೀಚ್‌ಗಳಾಗಿವೆ. ಈ ಬಗ್ಗೆ ಮಂಗಳೂರಿನ ಖಾಸಗಿ ಕಂಪನಿಯಿಂದ ಅಧ್ಯಯನ ನಡೆಸಲಾಗಿದೆ. ಅಧ್ಯಯನದಲ್ಲೂ ಇದು ಖಚಿತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

ಎರಡು ಕಡಲ ತೀರದಲ್ಲಿ ಐದು ಸೆಕೆಂಡ್‌ನಲ್ಲಿ ನೂರು ಮೀಟರ್‌ನಷ್ಟು ಸಮುದ್ರದ ಒಳಗೆ ಎಳೆದುಕೊಂಡು ಹೋಗುವಷ್ಟು ಅಲೆಗಳು ಪ್ರಭಾವವಾಗಿ ಬರುತ್ತವೆ. ಇದು ಸಾಕಷ್ಟು ಅಪಾಯಕಾರಿಯಾಗಿದ್ದು, ಈಜು ಬರುವವರು ಕೂಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ. ಇದರಿಂದ ಪ್ರವಾಸಿಗರು ಎಚ್ಚೆತ್ತುಕೊಳ್ಳಬೇಕು. ಮಳೆಗಾಲದಲ್ಲಿ ಸಾಕಷ್ಟು ಎಚ್ಚರದಿಂದ ಇರಬೇಕು ಎಂದು ಅವರು ಹೇಳಿದ್ದಾರೆ.

ಪೊಲೀಸ್ ಇಲಾಖೆಯಿಂದ ಸಿಬ್ಬಂದಿ,ಹೋಮ್ ಗಾರ್ಡ್‌ಗಳನ್ನು ಈ ಎರಡು ಕಡಲತೀರದಲ್ಲಿ ನೇಮಕ ಮಾಡಿದ್ದು, ಅಪಾಯಕಾರಿ ಸ್ಥಳದಲ್ಲಿ ತೆರಳದಂತೆ ಬೋರ್ಡ್‌ಗಳನ್ನು ಸಹ ಹಾಕಲಾಗಿದೆ. ಸ್ಥಳದಲ್ಲಿ ಲೈಫ್ ಗಾರ್ಡ್‌ಗಳನ್ನು ಸಹ ನೇಮಕ ಮಾಡಲಾಗಿದೆ. ಆದರೂ ಪ್ರವಾಸಿಗರು ಮುಖ್ಯವಾಗಿ ಎಚ್ಚರದಿಂದ ಇರಬೇಕು ಎಂದಿದ್ದಾರೆ.

ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಅನಾಹುತ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ವರದಿಯನ್ನು ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಜೊತೆ ಪೊಲೀಸ್ ಇಲಾಖೆ ಸಹ ಪ್ರವಾಸಿಗರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮುದ್ರದಲ್ಲಿ ಪ್ರವಾಸಿಗರು ನಿಗದಿತ ಸ್ಥಳದಲ್ಲಿ ಮಾತ್ರ ಈಜುವಂತೆ ಬಾಯ್‌ಗಳನ್ನು ಹಾಕಲು ನಿರ್ಧರಿಸಿದ್ದು, ಶೀಘ್ರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್.ಪಿ. ಶಿವಪ್ರಕಾಶ ದೇವರಾಜು ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button