Breaking Newsಉಡುಪಿಜಿಲ್ಲಾ ಸುದ್ದಿ
ಹೊಳೆಗೆ ಸ್ನಾನಕ್ಕೆ ಇಳಿದ ಕೃಷಿ ಕಾರ್ಮಿಕರಿಬ್ಬರ ಮುಳುಗಿ ಸಾವು

ಉಡುಪಿ : ಹೊಳೆಗೆ ಸ್ನಾನಕ್ಕೆಂದು ಹೋದ ಕೃಷಿ ಕಾರ್ಮಿಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನ ಆರ್ಡಿ ಗ್ರಾಮದಲ್ಲಿ ನಡೆದಿದೆ. ಅಲ್ಬಾಡಿ ಗ್ರಾಮದ ನಿವಾಸಿಗಳಾದ ಮೋಹನ ನಾಯ್ಕ್ (22) ಹಾಗೂ ಸುರೇಶ (19) ಮೃತ ದುರ್ದೈವಿ ಯುವಕರು.
ನಿನ್ನೆ ಸಂಜೆ ಇವರಿಬ್ಬರು ಮನೆಯ ಸಮೀಪದ ಹೊಳೆಗೆ ಸ್ನಾನಕ್ಕೆಂದು ನೀರಿಗೆ ಇಳಿದಾಗ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿ ಸಾವನ್ನಪ್ಪಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದೇ ಇದ್ದಾಗ, ಅನುಮಾನಗೊಂಡು ನದಿಯಲ್ಲಿ ಹುಡುಕಾಟ ನಡೆಸಿದಾಗ ತಡರಾತ್ರಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಶಂಕರನಾರಾಯಣ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
