Breaking Newsಜಿಲ್ಲಾ ಸುದ್ದಿರಾಮನಗರ

ಕ್ರಷರ್ ಗೆ ಅನುಮತಿ ನೀಡಿದ್ರೆ ವಿಷ ಕೊಡುವಂತೆ ಶಾಸಕರಿಗೆ ಗ್ರಾಮಸ್ಥರ ದಂಬಾಲು

ರಾಮನಗರ: ಮಾಗಡಿಯಲ್ಲಿ ಇತ್ತೀಚೆಗಷ್ಟೆ ಕ್ರಷರ್ ವಿಚಾರವಾಗಿ ಕ್ರಷರ್ ಮಾಲೀಕರು ಮತ್ತು ಪೊಲೀಸರ ನಡೆವೆ ದೊಡ್ಡ ಗಲಾಟೆಯೇ ನಡೆದು ಪಿಎಸ್‌ಐ ಶ್ರೀಕಾಂತ್ ರವರಿಗೆ ತಲೆಗೆ ಗಾಯವಾಗಿತ್ತು, ಈಗ ಮತ್ತೆ ಗ್ರಾಮಸ್ಥರು ಕ್ರಷಕರ್ ವಿರುದ್ದ ಸಿಡಿದಿದ್ದು ಶಾಸಕ ಎ.ಮಂಜುನಾಥ್ ಅವರಿಗೆ ಕ್ರಷರ್ ಮಾಡುವುದೇ ಆದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜೋಗಿಪಾಳ್ಯ, ಮದರಾಯನಪಾಳ್ಯ, ಕಲ್ಲಯ್ಯನಪಾಳ್ಯದ ಗ್ರಾಮಸ್ಥರು ಬೆದರಿಕೆ ಹಾಕಿದ ಘಟನೆ ನಡೆಯಿತು.

ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಕೆಡಿಪಿ ಸಭೆಗೆ ಆಗಮಿಸಿದ ಶಾಸಕರನ್ನು ಗ್ರಾಮಸ್ಥರು ಕ್ರಷರ್ ಮಾಡಬೇಡಿ ಎಂದು ಮನವಿ ಸಲ್ಲಸಿದರು, ಸಾವಿರಾರೂ ರೈತರು ಭೂಮಿಯನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ, ನಮ್ಮ ಗ್ರಾಮಕ್ಕೆ ಇಲ್ಲಿನ ಬೆಟ್ಟಗಳೇ ಪ್ರಕೃತಿ ಸೃಷ್ಠಿಸಿರುವ ವರವಾಗಿದೆ, ಆದರೆ ಇಲ್ಲಿ ಹಣ ಇದ್ದವರು ಕ್ರಷರ್ ಮಾಡಲು ಹೊರಟ್ಟಿರುವುದರಿಂದ ನಮಗೆ ದನ ಕರು ಮೇಯಿಸಲು ಜಾಗವೇ ಇಲ್ಲ ನಕಾಶೆ ನಕ್ಷೆ ಎಂದು ಅಕ್ರಮವಾಗಿ ರಸ್ತೆ ಮಾಡಲು ಕ್ರಷರ್ ಮಾಲೀಕರು ಹೊರಟ್ಟಿದ್ದಾರೆ, ಮತ್ತೆ ಕ್ರಷರ್ ಮಾಡಲು ಮುಂದಾದರೆ ಯಾವುದೇ ಕಾರಣಕ್ಕೂ ರೈತರು ಕ್ರಷರ್ ಮಾಡಲು ಬಿಡಲ್ಲ, ಅಲ್ಲೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಕೂಡಲೇ ಮತ್ತೊಮ್ಮೆ ಶಾಸಕರು, ತಹಶೀಲ್ದಾರ್ ಹಾಗೂ ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳು ಭೇಟಿ ನೀಡಿ ಕ್ರಷರ್ ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಗ್ರಾಮಸ್ಥರು ಶಾಸಕರನ್ನು ಒತ್ತಾಯಿಸಿದರು.

ಶಾಸಕ ಎ.ಮಂಜುನಾಥ್ ಮಾತನಾಡಿ, ಸರ್ಕಾರಕ್ಕೆ ಆದಾಯ ಬರುತ್ತದೆ ಎಂದರೆ ಯಾರನ್ನು ಕೇಳದೆ ಗಣಿ ಮಾಲೀಕರಿಗೆ ರಸ್ತೆ ಮಾಡಿಸಿಕೊಡುತ್ತಾರೆ, ೨೦೧೭-೧೮ ರಲ್ಲೆ ನಿಮ್ಮ ಪ್ರದೇಶವನ್ನು ಸೇಫರ್ ಜ್ಝೋನ್ ಎಂದು ಮಾಡಿರುವುದರಿಂದ ಗಣಿ ಮಾಲೀಕರಿಗೆ ತೊಂದರೆ ಕೊಡಲು ಆಗುವುದಿಲ್ಲ ಸರ್ಕಾರ ಸೇಫರ್ ಜ್ಝೋನ್ ಮಾಡುವಾಗ ಗ್ರಾಮಸ್ಥರು ತಕರಾರು ಅರ್ಜಿ ಕೊಟ್ಟು ಸೇಫರ್ ಜ್ಝೋನ್‌ನ್ನು ರದ್ದು ಪಡಿಸಬಹುದಾಗಿತ್ತು, ಈಗ ಹೋರಾಟ ಮಾಡಿದರೆ ಪ್ರಯೋಜನವಿಲ್ಲ ಆದರೂ ಕೂಡ ಗ್ರಾಮಸ್ಥರ ಮನವಿ ಮೇರೆಗೆ ಇನ್ನು ಕೆಲವೇ ದಿನಗಳಲ್ಲಿ ಅಧಿಕಾರಿಗಳ ತಂಡದ ಜೊತೆ ಗ್ರಾಮಕ್ಕೆ ಭೇಟಿ ಕೊಡುತ್ತೇನೆ ಆಗ ಗ್ರಾಮಸ್ಥರು ಒಪ್ಪಿ ಕ್ರಷರ್‌ಗೆ ಅನುಮತಿ ಕೊಟ್ಟರೆ ಕ್ರಷರ್ ಮಾಡಲಿ ಆಗ ವಿರೋಧ ಮಾಡಿದರೆ ಮತ್ತೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ, ಈಗ ಗ್ರಾಮಸ್ಥರು ಶಾಂತಿಯುತವಾಗಿ ಇರಬೇಕೆಂದು ಶಾಸಕರು ಮನವಿ ಮಾಡಿದರು.

ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಮಾತನಾಡಿ, ಸೇಫರ್ ಜ್ಝೋನ್ ಎಂದು ಬಂದ ಮೇಲೆ ಗಣಿ ಮಾಲೀಕರಿಗೆ ತೊಂದರೆ ಕೊಡಲು ಆಗುವುದಿಲ್ಲ ಸರ್ಕಾರ ನಮಗೆ ಏನು ಆದೇಶ ಕೊಡುತ್ತದೆಯೋ ಆ ರೀತಿ ನಡೆದುಕೊಳ್ಳಬೇಕು, ಕ್ರಷರ್‌ಗೆ ಹೋಗುವ ಜಾಗದ ಸಮಸ್ಯೆಯಾಗಿದ್ದು ಶಾಸಕರು ದಿನಾಂಕ ನಿಗಧಿ ಮಾಡಿದ ಮೇಲೆ ಮತ್ತೊಮ್ಮೆ ಸ್ಥಳ ಪರಿಶೀಲನೆ ಮಾಡುತ್ತೇವೆ ಅಲ್ಲಿಯವರೆಗೂ ಗ್ರಾಮಸ್ಥರು ಕ್ರಷರ್ ವಿರುದ್ದ ಯಾವುದೇ ರೀತಿ ಹೋರಾಟ ಮಾಡುವುದು ಬೇಡ ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button