ಉತ್ತರ ಕನ್ನಡಜಿಲ್ಲಾ ಸುದ್ದಿ

ಅಪರಿಚಿತ ವ್ಯಕ್ತಿಯ ಶವ ಎಳೆದೊಯ್ದ ಮೊಸಳೆ

ಕಾರವಾರ: ಮೊಸಳೆಯೊಂದು ಅಪರಿಚಿತ ವ್ಯಕ್ತಿಯ ಶವ ಎಳೆದೊಯ್ದ ಘಟನೆ ನಗರದ ಕುಳಗಿ ರಸ್ತೆಯ ಕಾಳಿ ನದಿ ಸೇತುವೆಯ ಕೆಳಗೆ ನಡೆದಿದೆ, ವ್ಯಕ್ತಿಯ ಒಂದು ಕೈ ಹಾಗೂ ಒಂದು ಕಾಲು ತುಂಡಾಗಿದ್ದು ಶವವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಶವ ದೊರೆತ ಸ್ಥಳದಲ್ಲಿ ಕೆಲ ಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು,

ಕಾಳಿ ನದಿ ಸೇತುವೆಯಿಂದ ಮೊಸಳೆಯು ಮೃತದೇಹವನ್ನು ಕೋಗಿಲಬನ ಗ್ರಾಮದ ಖಾಸಗಿ ರೆಸಾರ್ಟ್ ತನಕ ಎಳೆದುಕೊಂಡು ಹೋಗಿದ್ದು, ಶವ ಹೊರ ತರಲು ಜಂಗಲ್ ಸಫಾರಿ ರ್ಯಾಫ್ಟಿಂಗ್ ತಂಡ ಹಾಗೂ ಪೋಲೀಸ್ ಸಿಬ್ಬಂದಿ ಸಹಕರಿಸಿದ್ದಾರೆ.

ಮೃತ ವ್ಯಕ್ತಿಯ ಒಂದು ಕೈ ಹಾಗೂ ಒಂದು ಕಾಲು ತುಂಡಾಗಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಗುರುತು ಈದುರೆಗೂ ಪತ್ತೆಯಾಗಿಲ್ಲ.ವ್ಯಕ್ತಿಯು ಮೊಸಳೆ ದಾಳಿಗೆ ಒಳಾಗಿದ್ದರೋ,ಆತ್ಮಹತ್ಯೆಯೋ ? ಅಥವಾ ಕೊಲೆಯೋ? ಎಂಬುದು ತನಿಖೆಯಿಂದ ಬಯಲಾಗಬೇಕಿದೆ. ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಡಿ.ಎನ್.ಎ ಪರೀಕ್ಷೆ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ, ಕೋಗಿಲೆಬನ ಗ್ರಾಮ ಪಂಚಾಯತಿ ಅಧ್ಯಕ್ಷ ಅಶೋಕ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.ಈ ಕುರಿತು ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button