ಉತ್ತರ ಕನ್ನಡಜಿಲ್ಲಾ ಸುದ್ದಿ

ದೇವದತ್ ಕಾಮತ್ ಕಾನೂನು ಸಮನ್ವಯ ಸಮಿತಿ ಅಧ್ಯಕ್ಷ

ಕಾರವಾರ : ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯವಾದಿ ದೇವದತ್ ಕಾಮತ್ ಅವರನ್ನು ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಕಾನೂನು ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಈ ಕುರಿತು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಜಯಕುಮಾರ್ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಅವರು ಎಐಸಿಸಿಯ ನಿರ್ಧಾರದಂತೆ ಈ ಆದೇಶವನ್ನು ಮಾಡಿದ್ದಾರೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ಇತರೆ ಸಂಸ್ಥೆಗಳ ಜೊತೆ ಸಮನ್ವಯತೆ ಸಾಧಿಸಲು ರಚಿಸಿದ ಕಾನೂನು ಸಮನ್ವಯ ಸಮಿತಿ ಇದಾಗಿದೆ.ಇದಕ್ಕೆ ಎಐಸಿಸಿ ಅನುಮೋದನೆ ನೀಡಿದ್ದು,ದೇವದತ್ ಕಾಮತ್ ಅವರು ಅಧ್ಯಕ್ಷರಾಗಿ ಈ ಮಹತ್ವದ ಹುದ್ದೆಗೆ ನೇಮಕವಾಗಿದ್ದಾರೆ.ಅವರೊಂದಿಗೆ ಉಪಾಧ್ಯಕ್ಷರಾಗಿ ವರುಣ ಚೋಪ್ರಾ,ಸದಸ್ಯರಾಗಿ ನಿಶಾಂತ ಪಾಟೀಲ ಹಾಗೂ ಸ್ಮಾರ್ತ‌್ರ ಸಿಂಗ್ ನೇಮಕವಾಗಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button