Breaking NewsLatestಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಶಿಕ್ಷರ ವರ್ಗಾವಣೆ ದೊಡ್ಡ ಸಮಸ್ಯೆ ಅಲ್ಲ, ನನ್ನ ಕೈಯಲ್ಲಿ ಇದ್ದಿದ್ದರೆ ಅರ್ಧ ಗಂಟೆಯಲ್ಲಿ ಮಾಡುತ್ತಿದೆ: ಬಸವರಾಜ್ ಹೊರಟ್ಟಿ

ಧಾರವಾಡ : ಶಿಕ್ಷಕರ ವರ್ಗಾವಣೆಯ ಪ್ರಕ್ರಿಯೆ ದೊಡ್ಡ ಸಮಸ್ಯೆಯಲ್ಲ. ಅದನ್ನು ಸರ್ಕಾರ ದೊಡ್ಡ ಸಮಸ್ಯೆ ಅಂದುಕೊಂಡು ಸುಮ್ಮನೆ ಕುತ್ತಿದೆ. ನನ್ನ ಕೈಯಲ್ಲಿ ಇದ್ದಿದ್ದರೆ ಅರ್ಧಗಂಟೆಯಲ್ಲಿ ವರ್ಗಾವಣೆ ಮಾಡಿ ಮುಗಿಸುತ್ತಿದೆ. ಆದರೆ ಅಧಿಕಾರಿಗಳ ಸ್ವಾರ್ಥದಿಂದಾಗಿ ಎರಡು ಮೂರು ‌ವರ್ಷಗಳಿಂದ ಹಾಗೇ ಉಳಿದುಕೊಂಡಿದೆ. ಶಿಕ್ಷರ ವರ್ಗಾವಣೆ ಮಾಡಬೇಕು ಎಂದು ‌ಪರಿಷತ್ ಸಭಾತಿ ಬಸವರಾಜ್ ಹೊರಟ್ಟಿ ಒತ್ತಾಯ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮತಾನಾಡಿದ ಅವರು, ಈ ಹಿಂದೆ ಶಿಕ್ಷಕರ ವರ್ಗಾವಣೆಯ ಕುರಿತು 2007 ರಲ್ಲಿ ನಾವು ತಂದು ಕಾನೂನು ಪದೇ ಪದೇ ತಿರುಚಲಾಗುತ್ತಿದೆ. ಹಾಗಾಗಿ ಇಲ್ಲಿ ಸಮಸ್ಯೆ ಹೆಚ್ಚಾಗಿದೆ. ಸರ್ಕಾರ ಛಾಪೆ ಕೆಳಗೆ ನುಗ್ಗಿದ್ದರೆ, ಶಿಕ್ಷಣ ಇಲಾಖೆಯ ಕೆಲವು ಅಧಿಕಾರಿಗಳು ರಂಗೋಲಿ‌ ಕೆಳಗೆ ನುಗ್ಗುವವರು ಇದ್ದಾರೆ. ಇದರಿಂದಾಗಿ ಶಿಕ್ಷಕರಿಗೆ ಕಳೆದ ಎರಡು ವರ್ಷಗಳಿಂದು ತುಂಬಾ ತೊಂದರೆ ಉಂಟಾಗುತ್ತಿದೆ. ಅಲ್ಲದೆ ಶಿಕ್ಷಣ ಇಲಾಖೆಯ ಕೇಲವು ಅಧಿಕಾರಿಗಳು ತಮ್ಮಗೆ ಬೇಕಾದ ಶಿಕ್ಷಕರ ಪರ ಬ್ಯಾಟಿಂಗ್ ಮಾಡುತ್ತಾರೆ. ಅದೂ ಸರಿಯಲ್ಲ ಕೂಡಲೇ ಸರ್ಕಾರ ಇದರ ಬಗ್ಗೆ ಗಮನ ಹರಿಸಿ ವರ್ಗಾವಣೆ ಪ್ರಕ್ರಿಯೆ ಮಾಡಬೇಕು ಎಂದರು.

ಸ್ವಾರ್ಥ ಬಿಟ್ಟು ಜನಪರ ಕಾರ್ಯ ಮಾಡಬೇಕು:

ಇಂದಿನ ದಿನಮಾನಗಳಲ್ಲಿ ನಡೆಯುತ್ತಿರುವ ಚುನಾವಣೆಗಳು ಎಥಿಕ್ಸ್ ಮೇಲೆ ನಡೆಯುತ್ತಿಲ್ಕ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಹಲವರು ನಮ್ಮಗೆ ಆ ಅಭ್ಯರ್ಥಿ ಅದನ್ನು ಕೊಟ್ಟರು ಈ ಅಭ್ಯರ್ಥಿ ಇದನ್ನು ಕೊಟ್ಟರು ಅಂತಾ ಹೇಳುತ್ತಾರೆ. ಆದರೆ, ಬರುವ ದಿನಮಾನಗಳಲ್ಲಿ ಅವಳಿನಗರ ಸುಧಾರಣೆಯಾಗಬೇಕು ಹಾಗೂ ಅಭಿವೃದ್ಧಿ ಕಡೆಗೆ ಹೋಗಬೇಕು ಅಂದರೆ ಆಯ್ಕೆಯಾದ ಅಭ್ಯರ್ಥಿ ಸ್ವಾರ್ಥ ಸಾಧನೆ ಬಿಟ್ಟು ಜನಪರ ಕಾರ್ಯಗಳಿಗೆ ಒತ್ತು ನೀಡಬೇಕು ಎಂದರು.

ಕೊರೊನಾ ರೂಲ್ಸ್ ಫಾಲೋ ಮಾಡುವವರೆಗೆ ಮತದಾನ ಮಾಡಲು ಅವಕಾಶ ನೀಡಬೇಕು. ಮತದಾನ ಮಾಡು ವೇಳೆ ರೂಲ್ಸ್ ಉಲ್ಲಂಘನೆ ಮಾಡಿದಲ್ಲಿ ಅಂತವರಿಗೆ ಮತದಾನ ನಿರಾಕರಿಸಬೇಕು. ಸರ್ಕಾರದ ಕೊರೊನಾ ನಿಯಮಗಳಿಗೆ ಎಲ್ಲರೂ ಒಂದೆ ಜನಪ್ರತಿನಿಧಿಗಳಾದರು ಅಷ್ಟೇ, ಸಾಮನ್ಯರಾದರು ಅಷ್ಟೇ. ಕೊರೊನಾ ನಿಯಮ ಉಲ್ಲಂಘಿಸಿದವರು ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button