ಸಾಹಿತಿ ಚನ್ನವಿರ ಕಣವಿ ಮತದಾನಕ್ಕೆ ಭದ್ರತಾ ಸಿಬ್ಬಂದಿ ಸಾಥ್

ಧಾರವಾಡ : ಹುಬ್ಬಳ್ಳಿ- ಧಾರವಾಡ ಮಾಜಾನಗರ ಪಾಲಿಕೆ ಚುನಾವಣೆಯಲ್ಲಿ ಇಂದು ಬೆಳಿಗ್ಗೆ 7 ಗಂಟೆಯಿದ ಮತದಾನ ಆರಂಭವಾಗಿದ್ದು, ವಾರ್ಡ್ನ ಮತದಾರರು ಈಗ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಸಂವಿಧಾನಿಕ ಹಕ್ಕನ್ನು ಚಲಾವಣೆ ಮಾಡುತ್ತಿದ್ದಾರೆ. ಹಿರಿಯ ಸಾಹಿತಿ ಚನ್ನವೀರ ಕಣವಿಯವರು ಕೂಡಾ ಧಾರವಾಡದಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತ ಚಲಾವಣೆ ಮಾಡಿದ್ದಾರೆ.
ಹು – ಧಾ ಮಹಾನಗರ ಪಾಲಿಕೆ ವಾರ್ಡ್ ನಂ 19 ರ 1 ನೇ ಮತಗಟ್ಟಿಯಲ್ಲಿ ಹಿರಿಯ ಸಾಹಿತಿಯವರು ಇಳಿವಯಸ್ಸಿನಲ್ಲೂ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಸಂವಿಧಾನಿಕ ಮತದಾನ ಹಕ್ಕು ಚಲಾಯಿಸಿ ಯುವ ಸಮುದಾಕ್ಕೆ ಮಾದರಿಯಾದರು.
ಕೈ ಕಾರ್ಯಕರ್ತ – ಪೊಲೀಸ್‌ರ ನಡುವೆ ವಾಗ್ವಾದ:
ಮತದಾನ ಕೇಂದ್ರದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲವೆಂದು ಕೈ ಕಾರ್ಯಕರ್ತರ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ಧಾರವಾಡ ಕಮಲಾಪೂರ ಮತ ಕೇಂದ್ರ ಬಳಿ ನಡೆದಿದೆ.
ಧಾರವಾಡ ನಗರದ ವಾರ್ಡ್ ನಂ 4ರ ಮತಗಟ್ಟೆಯಾದ, ಕಮಲಾಪುರದ ಮಾನಸ ಗಂಗೋತ್ರಿ ಶಾಲೆಯ ಮತ ಕೇಂದ್ರದಲ್ಲಿ ಸರಿಯಾದ ಲೈಟಿಂಗ್ ವ್ಯವಸ್ಥೆ ಇಲ್ಲಾ. ಇದನ್ನು ಸರಿಪಡಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಮತದಾನ ಕೇಂದ್ರದಲ್ಲಿ ಬೆಳಕೆ ಇಲ್ಲದ ಪರಿಸ್ಥಿತಿಯಲ್ಲಿ ಮತದಾರು ಒಳಗಡೆಗೆ ಮತದಾನ ಮಾಡುವುದು ಹೇಗೆ ಎಂದು ಸ್ಥಳಿಯ ಚುನಾವಣಾ ಸಿಬ್ಬಂದಿಗಳನ್ನು ಕಾಂಗ್ರೆಸ್ ಕಾರ್ಯಕರ್ತ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಅವರನ್ನು ಹೊರಗಡೆ ಮತದಾನ ಕೇಂದ್ರದಿಂದ ಹೊರಗಡೆ ಹಾಕಲು ಯತ್ನಿಸಿದ್ದಾರೆ. ಇದರಿಂದ ಕೋಪಗೊಂಡ ಕಾರ್ಯಕರ್ತರ ಪೊಲೀಸರ ವಿರುದ್ಧವು ತನ್ನ ಆಕ್ರೋಶ ಹೊರಹಾಕಿದ್ದಾನೆ.
ಇನ್ನೂ ಕೈ ಕಾರ್ಯಕರ್ತ ಆಕ್ರೋಶಗೊಂಡ ಬೆನ್ನಲ್ಲೇ ಲೈಟಿಂಗ್ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಪೊಲೀಸ್ ಸಿಬ್ಬಂದಿ ಭರವಸೆ ನೀಡಿದ್ದಾರೆ. ಬಳಿಕ ಮಧ್ಯ ಪ್ರವೇಶ ಮಾಡಿದ ಕಾಂಗ್ರೆಸ್ ಸ್ಥಳಿಯ ನಾಯಕ ತಮ್ಮ ಕಾರ್ಯಕರ್ತನನ್ನು ಸಮಾಧಾನ ಪಡಿಸಿ ಕರೆದುಕೊಂಡು ಹೋಗಿದ್ದಾರೆ.




