ಜಿಲ್ಲಾ ಸುದ್ದಿರಾಮನಗರ

ವಸತಿ‌ ಶಾಲೆಯ ಮುಖ್ಯಶಿಕ್ಷಕರು ಸರಿಯಿಲ್ಲ- ಕೂಡಲೇ ನಮಗೆ ಬೇರೆ ಶಿಕ್ಷಕರನ್ನ ನೀಡಿ: ವಿದ್ಯಾರ್ಥಿಗಳ ಅಳಲು

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಟ್ಟೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಕೇಳಿ ಬಂದಿದೆ.

ನಮಗೆ ಮುಖ್ಯಶಿಕ್ಷಕರು ಅವಾಚ್ಯ ಶಬ್ಧಗಳನ್ನು ಬಳಿಸಿ ದೈಹಿಕವಾಗಿ ಹಿಂಸಿಸುತ್ತಿದ್ದಾರೆ. ಕಾಫಿ ರೈಟಿಂಗ್ ತರುವಂತೆ ಹೇಳಿ ವಿನಾಃ ಕಾರಣ ಬೈಯುತ್ತಾರೆ. ತಲೆ ಕೂದಲು ಹಿಡಿದು ಬೆನ್ನಿಗೆ ಹೊಡೆಯುತ್ತಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಕೇವಲ ವಿದ್ಯಾರ್ಥಿಗಳಿಗೆ ಮಾತ್ರ ವಲ್ಲದೆ ಶಾಲೆಯ ಮಹಿಳಾ ಶಿಕ್ಷಕಿಯರಿಗೂ ಏಕವಚನದಲ್ಲಿ ಮಾತನಾಡಿಸುತ್ತಾರೆ. ಇದು ಅಲ್ಲದೆ ರಾತ್ರಿ ಊಟದ ಬಳಿಕ 8.30 ರಿಂದ 10 ಗಂಟೆವರೆಗೆ ನಿಲ್ಲಿಸಿದ್ದಾರೆ. ಈ ಹಿಂದೆ ಇದ್ದ ಹಳೆ ಪ್ರಿನ್ಸಿಪಾಲರು ನಮಗೆ ಕಾಫಿರೈಟಿಂಗ್ ಬರೆಯುವಂತೆ ಹೇಳಿರಲಿಲ್ಲ. ಆದ್ದರಿಂದ ನಾವು ಕಾಫಿರೈಟಿಂಗ್ ಬರೆದಿರಲಿಲ್ಲ.

ಕಾಫಿರೈಟಿಂಗ್ ಬರೆಯದಿದ್ದರೆ ಬಾಸುಂಡೆ ಬರುವಂತೆ ಕೃಷ್ಣಮೂರ್ತಿ ಸರ್ ಎಲ್ಲರಿಗೂ ಹೊಡೆದಿದ್ದಾರೆ. ನಮಗೆ ಕೃಷ್ಣಮೂರ್ತಿ ಅವರು ಬೇಡ ಬೇರೆ ಪ್ರಿನ್ಸಿಪಾಲರ‌ನ್ನು ಕೊಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button