ಚಿಕ್ಕಬಳ್ಳಾಪುರಜಿಲ್ಲಾ ಸುದ್ದಿ
ಹಿಜಾಬ್ ತೆಗೆಸಲು ಹೆತ್ತವರಿಗೆ ಹಕ್ಕಿಲ್ಲ, ಇವನ್ಯಾರು ಕೇಳೋಕೆ ಎಂದು ಶಿಕ್ಷಕರ ವಿರುದ್ಧ ವಿದ್ಯಾರ್ಥಿ ಅವಾಜ್!

ಚಿಕ್ಕಮಗಳೂರು: ನಮ್ಮ ತಂದೆ ತಾಯಿಯಂದಿರಿಗೆ ಹಿಜಾಬ್ ತೆಗೆಯಿರಿ ಎಂದು ಹೇಳೋಕೆ ರೈಟ್ಸ್ ಇಲ್ಲ. ಹೀಗಿರುವಾಗ ಅವನು ಯಾವನು ಬಂದ್ಬಿಟ್ಟು ಹಿಜಾಬ್ ತೆಗೆಯಿರಿ ಎಂದು ಹೇಳೋಕೆ ಎಂದು ವಿದ್ಯಾರ್ಥಿಯೊಬ್ಬ ಶಿಕ್ಷಕರ ವಿರುದ್ಧ ತಿರುಗಿ ಬಿದ್ದಿದ್ದಾನೆ.
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರನ್ನು ಶಿಕ್ಷಕರು ಹೊರಗೆ ಕಳುಹಿಸುತ್ತಿದ್ದಂತೆ ಕೆಲ ವಿದ್ಯಾರ್ಥಿಗಳು ಶಿಕ್ಷಕರ ಮೇಲೆ ಗರಂ ಆಗಿದ್ದಾರೆ. ಮೂಡಿಗೆರೆಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಘಟನೆ ನಡೆದಿದ್ದು, ನಮ್ಮ ಮಕ್ಕಳನ್ನು ಹಿಜಾಬ್ ಇಲ್ಲದೆ ಕಾಲೇಜಿಗೆ ಕಳಿಸಲ್ಲ. ಮಕ್ಕಳಿಗೆ ಸಮಸ್ಯೆಯಾದರೆ ಯಾವ ಸರ್ಕಾರ, ಪೊಲೀಸರು, ಕೋರ್ಟ್ ಸಹಾಯಕ್ಕೆ ಬರಲ್ಲ ಎಂದು ಕೆಲ ಪೋಷಕರು ಗುಡುಗಿದ್ದಾರೆ.
ಕಾಲೇಜು ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿ ಇಷ್ಟು ದಿನ ಇಲ್ಲದ ಸಮಸ್ಯೆ ಈಗ ಹೇಗೆ ಎದುರಾಯಿತು ಎಂದೂ ಕೇಳಿದ್ದಾರೆ. ಪರೀಕ್ಷೆ ಬರೆಯದೇ 35 ವಿದ್ಯಾರ್ಥಿಗಳು ಮನೆಗೆ ವಾಪಸ್ಸಾಗಿದ್ದಾರೆ.




