ಮಾಗಡಿಯಲ್ಲಿ ಹುಚ್ಚು ನಾಯಿ ಕಾಟಕ್ಕೆ ಬೆಚ್ಚಿದ ಜನತೆ; ಒಂದೇ ದಿನ 16 ಮಂದಿ ಮೇಲೆ ದಾಳಿ

ರಾಮನಗರ: ಹುಚ್ಚು ನಾಯಿಯೊಂದು ಮಾಗಡಿ ಪಟ್ಟಣದಲ್ಲಿ ಮನಸ್ಸೋ ಇಚ್ಚೇ ಸಾರ್ವಜನಿಕರ ಮೇಲೆ ಎರಗಿದ್ದು ರಾತ್ರಿ 13 ಮಂದಿ ಮೇಲೆ ದಾಳಿ ಮಾಡಿ ಬೆಳಗ್ಗೆ 3 ಮಂದಿ ಮೇಲೆ ಒಟ್ಟು 16 ಮಂದಿಗೆ ಹುಚ್ಚು ನಾಯಿ ಕಡಿಯುವ ಮೂಲಕ ಆತಂಕ ಸೃಷ್ಠಿಸಿತ್ತು.
ಪಟ್ಟಣದ ಕಲ್ಯಾಗೇಟ್ ಸುತ್ತ ಮುತ್ತ ರಾತ್ರಿ ಬಿಳಿ ಬಣ್ಣದ ಹುಚ್ಚು ನಾಯಿ ಸಾರ್ವಜನಿಕರ ಮೇಲೆ ದಾಳಿ ಮಾಡಿದೆ, 13 ಮಂದಿಗೆ ನಾಯಿ ಕಚ್ಚಿದ್ದು ರಾತ್ರಿ ಒಬ್ಬರಾದ ಮೇಲೆ ಒಬ್ಬರಂತೆ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡದರು, ಬೆಳಗ್ಗೆ ಮತ್ತೆ ಮೂವರ ಮೇಲೆ ಅದೇ ನಾಯಿ ದಾಳಿ ಮಾಡಿದೆ ಆದರೆ ಇಲ್ಲಿಯವರೆಗೂ ನಾಯಿಯ ಸುಳಿವು ಮಾತ್ರ ಸಿಕ್ಕಿಲ್ಲ. ಮಾಗಡಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತುಂಬಾನೆ ಹೆಚ್ಚಾಗಿದ್ದು ದ್ವಿಚಕ್ರ ವಾಹನ ಸವಾರರು, ಮಕ್ಕಳು, ನಿರ್ಭೀತಿಯಾಗಿ ಓಡಾಡುವುದ ಕಷ್ಟಕರವಾಗಿದೆ. ಪುರಸಭೆ
ಇಡೀ ಶಾಪ:
ಹಲವು ವರ್ಷಗಳಿಂದಲೂ ಪುರಸಭೆಗೆ ನಾಯಿಗಳ ಕಾಟ ತಪ್ಪಿಸಿ ಎಂದು ಸಾಕಷ್ಟು ಬಾರಿ ಮನವಿ ಮಾಡಿದ್ದರು, ಬೀದಿ ನಾಯಿ ಹಿಡಿಯುವ ಕೆಲಸ ಮಾಡುತ್ತಿಲ್ಲ. ಪುರಸಭೆ ಸಿದ್ದವಾದ ಉತ್ತರವನ್ನು ಹುಡುಕಿಕೊಂಡಿದ್ದು ನಾಯಿ ಹಿಡಿದರೆ ಪ್ರಾಣಿ ಪ್ರೀಯರು ವಿರೋಧಿಸುತ್ತಾರೆ, ನಾವು ಏನು ಮಾಡಬೇಕೆಂಬ ಉತ್ತರವನ್ನು ಸಿದ್ದಪಡಿಸಿಕೊಂಡಿದ್ದು ಒಂದೇ ದಿನ 16 ಮಂದಿ ಮೇಲೆ ದಾಳಿ ಮಾಡಿದೆ ಎಂದರೆ ಇನ್ನೆಷ್ಟು ಮಂದಿಗೆ ನಾಯಿ ಕಡಿಯಬೇಕು, ಆಗ ಪುರಸಭೆಯವರು ಎಚ್ಚುತ್ತುಕೊಳ್ಳುತ್ತಾರಾ ಎಂದು ನಾಗರೀಕರು ಪ್ರಶ್ನಿಸಿದ್ದಾರೆ.
ಪುರಸಭೆ ಮಾಜಿ ಅಧ್ಯಕ್ಷೆ ಪದ್ಮ ಭೋಗೇಶ್ ರವರಿಗೆ ಬೆಳಗ್ಗೆ ಡೂಂ.ಲೈಟ್ ಸರ್ಕಲ್‌ನಲ್ಲಿ ಮಾರ್ಕೆಟ್‌ಗೆ ಹೋಗುವಾಗ ಹುಚ್ಚುನಾಯಿ ಕಡಿದಿದೆ, ಪುರಸಭೆ ಬೇಜವಾಬ್ದಾರಿ ತನ ಮೆರೆಯದೆ ನಾಯಿ ಕಾಟವನ್ನು ತಪ್ಪಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆ ಶಾಸಕ ಎ.ಮಂಜುನಾಥ್ ರವರು ಪುರಸಭಾ ಅಧಿಕಾರಿಗಳ ಜೊತೆ ಮಾತನಾಡಿ, ನಾಯಿ ಕಾಟ ತಪ್ಪಿಸುವ ಕೆಲಸವನ್ನು ಕೂಡಲೇ ಮಾಡಬೇಕೆಂದು ಸೂಚನೆ ನೀಡಿದ್ದಾರೆ. ಬೀದಿ ನಾಯಿ ಕಾಟದಿಂದ ಸಾರ್ವಜನಿಕರು ಭಯಪಡುವ ವಾತಾವರಣ ನಿರ್ಮಾಣವಾಗಿರುವುದು ಶೌಚನೀಯವಾಗಿದೆ.




