ಆರ್ ಆರ್ ಆರ್ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪುನೀತ್ ನೆನೆದು ಭಾವುಕರಾದ ಸ್ಟಾರ್ಸ್

ನಟ ಪವರ್ ಸ್ಟಾರ್ ನಮ್ಮನಗಲಿ ಐದು ತಿಂಗಳು ಹತ್ತಿರವಾಗಿದ್ರು ಇಂದಿಗೂ ಕೋಟ್ಯಾಂತರ ಅಭಿಮಾನಿಗಳೂ ಅವರ ನೆನಪಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಅಪ್ಪು ಇಲ್ಲ ಎನ್ನುವ ಕಟು ಸತ್ಯ ಸ್ವೀಕರಿಸೋಕೆ ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ರನ್ನ ನೆನೆದು ನಟ ರಾಮ್ ಚರಣ್ ಭಾವುಕರಾಗಿದ್ದಾರೆ.
ಆರ್ ಆರ್ ಆರ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ವೇದಿಕೆಯಲ್ಲಿ ಮಾತನಾಡಿದ ರಾಮ್ ಚರಣ್, ಪುನೀತ್ ಅವರು ಎಂದಿಗೂ ನಮ್ಮ ಕೈ ಹಿಡಿದುಕೊಂಡು ನಡೆಸುತ್ತಿರುತ್ತಾರೆ ಎಂದು ಭಾವಿಸುತ್ತೇನೆ. ಶಿವರಾಜ್ ಕುಮಾರ್ ಅವರಲ್ಲಿಯೇ ಪುನೀತ್ ಅವರನ್ನು ಕಾಣುತ್ತೇನೆ. ನಾವು ಸಾಯೋವರೆಗೂ ಅವರನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿ ರಾಮ್ ಚರಣ್ ಭಾವುಕರಾದರು.
ಇನ್ನೂ ನಟ ಜೂನಿಯರ್ ಎನ್ ಟಿ ಆರ್ ಮಾತನಾಡಿ ಪುನೀತ್ ಸಾರ್ ಇಲ್ಲ ಅಂತ ಯಾವತ್ತು ನಂಬೋದಿಲ್ಲ. ಏಕೆಂದರೆ ಅವರ ಪಾರ್ಥಿವ ಶರೀರ ನೋಡಲು ಬಂದಾಗ ಅವರು ಈ ಗಾಳಿಯಲ್ಲಿ, ಈ ಮಣ್ಣಿನಲ್ಲೇ ಇರುತ್ತೇನೆ ಎಂದು ಹೇಳಿದಂತೆ ನನಗೆ ಅನಿಸಿತ್ತು. ಈಗ ಈ ಕಾರ್ಯಕ್ರಮ ನಡೆಯೋ ಸಂದರ್ಭದಲ್ಲಿ ತಣ್ಣನೆಯ ಗಾಳಿಯಲ್ಲಿ, ಮಳೆ ಹನಿಗಳ ರೂಪದಲ್ಲಿ ನಮ್ಮೊಂದಿಗೆ ಇದ್ದಾರೆ ಎಂದರು.




