
ಗೂಗಲ್ ಎಂದರೆ ಅಂತರ್ಜಾಲ ಹುಡುಕಾಟದ ಒಂದು ಯಂತ್ರ ಎಂದು ಹೇಳಲಾಗುವುದು.ಪ್ರಪಂಚದಾದ್ಯಂತ ಪ್ರತಿನಿತ್ಯ ಎಷ್ಟೋ ಕೋಟಿಯಾಂತರ ಜನಗಳು ಗೂಗಲ್ ಅನ್ನು ಬಳಸುತ್ತಾರೆ. ಅದೇ ರೀತಿ ವಿಶ್ವದಾದ್ಯಂತ ಹೊಸ ಕಂಪನಿಗಳ ಸ್ಥಾಪನೆ ಹೆಚ್ಚಾದಂತೆ ಜನರು ಗೂಗಲ್ ಮ್ಯಾಪ್ ಅನ್ನು ಮೊದಲಿಗಿಂತ ಹೆಚ್ಚು ಅವಲಂಬಿತರಾಗಿದ್ದಾರೆ.
ಇದ್ದಕ್ಕಿದ್ದಹಾಗೆ ಗೂಗಲ್ ಮ್ಯಾಪ್ ಸ್ಥಗಿತಗೊಂಡರೆ ಜನರ ಪರದಾಟ ಹೇಗಿರಬಹುದು? ಉದಹಾರಣೆಗೆ
ನಗರ ಗ್ರಾಮಿಣ ಪ್ರದೇಶ ಸೇರಿದಂತೆ ಯವುದೇ ಮೂಲೆಯಲ್ಲಿ ಉದ್ದೇಶಿತ ಸ್ಥಳಗಳಿಗೆ ಪ್ರಯಾಣಿಸಲು ದಾರಿ ತೋರಿಸುವ ಗೂಗಲ್ ಮ್ಯಾಪ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಭಾರತ, ಅಮೆರಿಕ, ಬ್ರಿಟನ್, ಕೆನಡಾ ಸೇರಿದಂತೆ ಹಲವು ದೇಶಗಳ ಲಕ್ಷಾಂತರ ಬಳಕೆದಾರರು ದಿಕ್ಕುತೋಚದೆ ಪರದಾಡುವಂತಾಗಿತ್ತು. ಭಾರತದಲ್ಲಿ ವೆಬ್ ಮತ್ತು ಮೊಬೈಲ್ ಮ್ಯಾಪ್ ಎರಡು ಸ್ಥಗಿತಗೊಂಡಿದ್ದು, ಗೂಗಲ್ ಮ್ಯಾಪ್ ಮೇಲೆ ಕ್ಲಿಕ್ಕಿಸಿದಾಗ ಖಾಲಿಪೇಜ್ ಕಾಣಿಸಿಕೊಂಡಿತು.
ಹೀಗಾಗಿ ಗೂಗಲ್ ಮ್ಯಾಪ್ ಅನ್ನು ಅವಲಂಬಿಸಿರುವ ಸ್ವಿಗ್ಗಿ, ಜೊಮೇಟೋ ಮುಂತಾದ ಡೆಲವರಿ ಕಂಪನಿಗಳು ಕೆಲ ಕಾಲ ಕೆಲಸನಿಲ್ಲಿಸಿವುವಂತಾಗಿತ್ತು. ಈ ಮಧ್ಯ ಆ್ಯಪಲ್ ಮ್ಯಾಪ್ ಇದನ್ನೇ ಲಾಭವಾಗಿ ಬಳಿಕೆ ಮಾಡಿಕೊಂಡಿತು. ಈ ಬಗ್ಗೆ ಜಾಲತಾಣಗಳಲ್ಲಿ ಸಾಕಷ್ಟು ಜೋಕ್ ಸಹ ಹರಿದಾಡಿದವು. ಬಳಿಕ ತಾಂತ್ರಿಕ ದೋಷ ನಿವಾರಣೆಯಾಗಿ ಗೂಗಲ್ ಮ್ಯಾಪ್ ಹಿಂದಿನಂತೆ ಕಾರ್ಯಾರಂಭ ಮಾಡಿದೆ. ಆದರೆ ಸ್ಥಗಿತಕ್ಕೆ ಕಾರಣವೇನೆಂದು ಗೂಗಲ್ ಇನ್ನೂ ಬಹಿರಂಗಪಡಿಸಿಲ್ಲ.




