ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಶ್ರೀರಾಮನವಮಿ ಆಚರಣೆ: ಡಿಜೆ ಹಾಡಿಗೆ ಕೇಂದ್ರ ಸಚಿವರ ಸ್ಟೆಪ್!

ಹುಬ್ಬಳ್ಳಿ: ಶ್ರೀರಾಮನವಮಿ ಆಚರಣೆ ದೇಶಾದ್ಯಂತ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದು, ಇದಕ್ಕೆ ವಾಣಿಜ್ಯನಗರಿ ಕೂಡ ಹೊರತಾಗಿರಲಿಲ್ಲ. ಹುಬ್ಬಳ್ಳಿಯಲ್ಲಿ ಸ್ವತಃ ಕೇಂದ್ರ ಸಚಿವರೇ ಡಿಜೆ ಹಾಡಿಗೆ ಸ್ಟೇಫ್ ಹಾಕುವ ಮೂಲಕ‌ ರಾಮನವಮಿ ಆಚರಣೆಗೆ ಅದ್ದೂರಿಯಾಗಿ ಚಾಲನೆ ನೀಡಿದ್ದಾರೆ.

ರಾಮನವಮಿ ಅಂಗವಾಗಿ ಹುಬ್ಬಳ್ಳಿಯ ನಗರದಾದ್ಯಂತ ಕೇಸರಿ ಬಾವುಟಗಳ ಕಲರವ, ಡಿಜೆ ಹಾಡಿನ ಸಂಭ್ರಮ ಮನೆಮಾಡಿತ್ತು. ಇದರ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಭರ್ಜರಿ ಸ್ಟೆಪ್ ಹಾಕಿ ರಾಮನವಮಿ ಮೆರಗನ್ನು ಹೆಚ್ಚಿಸಿದರು.

ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕಾರ್ಯಕರ್ತರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂಭ್ರಮಿಸಿದರು. ರಾಮನವಮಿ ನಿಮಿತ್ತ ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮ ನಾಮಕ್ಕೆ ತಲೆದೂಗುತ್ತ ಭರ್ಜರಿ ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

Related Articles

Leave a Reply

Your email address will not be published. Required fields are marked *

Back to top button