ಉತ್ತರ ಕನ್ನಡಜಿಲ್ಲಾ ಸುದ್ದಿ

ಡೆತ್ ನೋಟ್ ಬರೆದಿಟ್ಟು ಕಂದಾಯ ನೌಕರ ಆತ್ಮಹತ್ಯೆ

ಕಾರವಾರ : ಡೆತ್‌ನೋಟ್ ಬರೆದಿಟ್ಟು ಸರ್ಕಾರಿ ಉದ್ಯೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಪ್ರೀಮಿಯರ್ ಹೊಟೇಲ್‌‌ನಲ್ಲಿ ನಡೆದಿದೆ.

ಕಾರವಾರ ಉಪವಿಭಾಗ ಕಛೇರಿಯ ಕಂದಾಯ ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿದ್ದ ಈಶ್ವರ ಭಟ್ (38) ನೇಣಿಗೆ ಶರಣಾದ ದುರ್ದೈವಿಯಾಗಿದ್ದು, ಮೂಲತಃ ಹೊನ್ನಾವರ ತಾಲೂಕಿನವರಾಗಿದ್ದಾರೆ.ಅನಾರೋಗ್ಯದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್ ಬರೆದಿಟ್ಟಿದ್ದಾರೆ.

ಪತ್ನಿ ಮತ್ತು ಪೊಲೀಸರಿಗೆ ಪ್ರತ್ಯೇಕ ಡೆತ್‌ನೋಟ್ ಅನ್ನು ಇರಿಸಿದ್ದಾರೆ.ನಾನು ನಿನಗಾಗಿ ಆಸ್ತಿ ಮಾಡಿಲ್ಲ,ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಪತ್ನಿಗೆ ಪತ್ರದಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ.ಸ್ಥಳಕ್ಕೆ ಕಾರವಾರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button