ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದಲ್ಲಿ ರೋಗಿಯ ಸಂಬಂಧಿ ಮೇಲೆ ಆಸ್ಪತ್ರೆ ಸಿಬ್ಬಂದಿ ಹಲ್ಲೆ

ಧಾರವಾಡ: ತನ್ನ ತಾಯಿಯ ಕಣ್ಣಿನ ಆಪರೇಷನ್ ಹಿನ್ನೆಲೆ ವಾರ್ಡ್​ನಲ್ಲಿದ್ದ ತಾಯಿಯನ್ನು ನೋಡಲು ಬಂದ ಮಗ ಹಾಗೂ ಮಗನ ಸ್ನೇಹಿತನ ಮೇಲೆ ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಮನಸೋ ಇಚ್ಚೆ ಹಲ್ಲೆ ಮಾಡಿರುವ ಘಟನೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಕಳೆದ ದಿನ ತಡ ರಾತ್ರಿ ನಡೆದಿದೆ.

ಮಹ್ಮದ ಸಾದಿಕ್ ಸವಣೂರ ಹಾಗೂ ತೌಫೀಕ್ ಎನ್ನುವವರ ಮೇಲೆಯೇ ಆಸ್ಪತ್ರೆಯ 7, ಜನ ಸಿಬ್ಬಂದಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನೂ ಆಸ್ಪತ್ರೆಯ ಸಿಬ್ಬಂದಿಗಳ ಹಲ್ಲೆಯಿಂದ ರೋಗಿಯ ಮಗ ಮಹ್ಮದ್ ಸಾಧಿಕ ಹಾಗೂ ತೌಫೀಕ ಇಬ್ಬರ ಮೈ ಮೇಲೆ ಬಾಸುಂಡೆಗಳು ಮೂಡಿದ್ದು, ವಾರ್ಡ್​​ನಿಂದ ಹೋರ ಬರುತ್ತಿರುವಾಗ ಆಸ್ಪತ್ರೆಯ ಸಿಬ್ಬಂದಿಗಳೇ ತಗಾದೇ ತೆಗೆದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ :

ಸಾದಿಕ್ ಎನ್ನುವ ಯುವಕ ತನ್ನ ತಾಯಿಯನ್ನು ಕಣ್ಣಿನ ಆಪರೇಷನ್‌‌ಗಾಗಿ. ಕಳೆದ ದಿನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಡ ರಾತ್ರಿ ತಾಯಿ ನೋಡಲು ಮಹ್ಮದ ಸಾಧಿಕ ಹಾಗೂ ಸ್ನೇಹಿತ ತೌಫಿಕ ಆಸ್ಪತ್ರೆಗೆ ಬಂದಿದ್ದಾರೆ. ಇನ್ನೂ ಆಪರೇಷನ್ ಆದ ನಂತರ ರೋಗಿಗೆ ವಾರ್ಡ್​​ಗೆ ಶಿಫ್ಟ್ ಮಾಡಲಾಗಿದೆ. ವಾರ್ಡನಲ್ಲಿದ್ದ ತಾಯಿನ್ನು ಮಗ ನೋಡಲು ತೆರಳಿದ್ದಾನೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾದಿಕ್ ನಡುವೆ ಜಗಳ ಆರಂಭವಾಗಿದೆ. ಜಗಳ‌ ವಿಕೋಪಕ್ಕೆ ಹೋಗಿ ಆಸ್ಪತ್ರೆಯ ಸಿಬ್ಬಂದಿಗಳು ಸೇರಿ ಸಾದಿಕ್ ಹಾಗೂ ಜಗಳ ಬಿಡಿಸಲು ಬಂದಿದ್ದ ತೌಫೀಕ್ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾರೆ.

ಇನ್ನೂ ಹಲ್ಲೆಗೆ ಒಳಗಾದ ರೋಗಿಯ ಸಂಬಂಧಿಗಳಿಬ್ಬರು ಸದ್ಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡಿದ್ದಾರೆ. ಅಲ್ಲದೇ ಹಲ್ಲೆ ಮಾಡಿದ ಸಿಬ್ಬಂದಿಗಳಿಂದಲ್ಲೂ ಪ್ರತಿ ದೂರು ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button