ರಾಮನಗರ

ಪ್ರವಾಸಿ ತಾಣಗಳ ನಿರ್ಬಂಧಕ್ಕೆ ರಾಮನಗರ ಜಿಲ್ಲಾಡಳಿತ ಚಿಂತನೆ

ರಾಮನಗರ: ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರಕಾರವು ಕೆಲ ಜಿಲ್ಲೆಗಳಲ್ಲಿ ವಿಧಿಸಿದ್ದ ವಾರಂತ್ಯದ ಕರ್ಪ್ಯೂ , ಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ.

ಶನಿವಾರ ಹಾಗು ಭಾನುವಾರ ಜಿಲ್ಲೆಯ ಪ್ರವಾಸಿ ತಾಣಗಳೆಲ್ಲವು ಹೌಸ್ ಫುಲ್ ಆಗಿದ್ದು, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.
೩ನೇ ಈಗಾಗಲೇ ಅಬ್ಬರಿಸಿದೆ. ಇದರ ನಡುವೆ, ಹೊರ ಜಿಲ್ಲೆಗಳಿಂದ ಪ್ರವಾಸಿಗರ ಸಂಖ್ಯೆ ಜಿಲ್ಲೆಯಲ್ಲಿ ಮೀತಿ ಮೀರಿತ್ತು. ಅದರಲ್ಲೂ ಮಾಸ್ಕ್ ಇಲ್ಲದೇ ಓಡಾಟ, ಸ್ಯಾನಿಟೈಸರ್ ಮಾತ್ರವಲ್ಲ, ಸಂಗಮ-ಮೇಕೆದಾಟು ಪ್ರದೇಶದಲ್ಲಿ ಜನಸಮೂಹವೇ ನೆರೆದಿತ್ತು. ಪ್ರವಾಸೊದ್ಯಮ ಇಲಾಖೆ ಅಕಾರಿಗಳು ಕನಿಷ್ಟ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಸಹ ಮಾಡಿರಲಿಲ್ಲ

ಹೀಗಾಗಿ ಕೋವಿಡ್ ಅಲೆ ಜಿಲ್ಲೆಯಲ್ಲಿ ಇನ್ನಷ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ. ಇದರಿಂದಾಗಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ವಾರದಿಂದ ಪ್ರವಾಸಿ ತಾಣಗಳಿಗೆ ಕೊಕ್ಕೆ ಬೀಳಲಿದ್ದು, ಮತ್ತೆ ಜಿಲ್ಲೆಯಲ್ಲಿ ಭಾಗಶಃ ಲಾಕ್‌ಡೌನ್ ಆಗುವ ಸಾಧ್ಯತೆಗಳು ದಟ್ಟವಾಗಿವೆ.

ಪ್ರವಾಸಿಗರೇ ಕಾರಣ:

ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರವಾಸಿ ತಾಣಗಳಿವೆ. ರಾಮದೇವರ ಬೆಟ್ಟ, ಕೂಟಗಲ್, ಸಾವನದುರ್ಗ, ಮಂಚನಬೆಲೆ, ಶ್ರೀರಂಗನಾಥ ಸ್ವಾಮಿ ದೇವಾಲಯ, ಮೇಕೆದಾಟು-ಸಂಗಮ, ಅಪ್ರಮೇಯ ಕೃಷ್ಣ, ಕೆಂಗಲ್, ಮುತ್ತತ್ತಿ, ಇದರೊಂದಿಗೆ ಲೆಕ್ಕವಿಲ್ಲದಷ್ಟು ರೆರ್ಸಾಟ್, ಹೋಂ ಸ್ಟೇ ಹಾಗು ಇದೇ ತಿಂಗಳ ೧೨ರಿಂದ ವಂಡರ್ ಲಾ ಸಹ ಬಾಗಿಲು ತೆರೆಯುತ್ತಿದೆ. ಇನೋವೆಟಿವ್ ಫಿಲ್ಮ್ ಸಿಟಿ ಸೇರಿದಂತೆ ಅನೇಕ ತಾಣಗಳು ಭಾನುವಾರ ಹೌಸ್ಫುಲ್ ಆಗಿದ್ದವು. ಜಿಲ್ಲೆಯಲ್ಲಿ ವಿಕೆಂಡ್ ಕರ್ಪ್ಯೂ ಸಹ ಇಲ್ಲದಿದ್ದ ಹಿನ್ನಲೆಯಲ್ಲಿ ಹೊರ ಜಿಲ್ಲೆಗಳಿಂದಲ್ಲೇ ಅನೇಕ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದರು. ಮಹಾಲಯ ಅಮವ್ಯಾಸೆಯು ಭಾನುವಾರವೇ ಇದ್ದ ಕಾರಣ ಸಾರ್ವಜನಿಕರು ನಿಯಂತ್ರಿಸುವುದರಲ್ಲಿ ಜಿಲ್ಲಾಡಳಿತವು ವಿಫಲಗೊಂಡಿತ್ತು.
ಹೀಗಾಗಿ, ಪ್ರವಾಸಿಗರ ಆಂತುರದ ನಿರ್ಧಾರಗಳಿಂದಾಗಿ ಕೋವಿಡ್ ಸೋಂಕು ಅತೀ ವೇಗವಾಗಿ ಹರಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಇದರೊಂದಿಗೆ ಪ್ರವಾಸಿ ತಾಣಗಳ ಕಣ್ಣಿಡಬೇಕಿದ್ದ ಪ್ರವಾಸೋಧ್ಯಮ ಇಲಾಖೆ ಇದಕ್ಕೂ ನಮಗೆ ಸಂಬಂಧವೇ ಇಲ್ಲ ಎಂಬಂತ್ತಾಗಿದೆ. ಎಲ್ಲಿಯು ಸಣ್ಣ ನಿರ್ಬಂಧವನ್ನು ವಿಧಿಸಿರಲಿಲ್ಲ. ಇದರೊಂದಿಗೆ ಪ್ರವಾಸಿ ಮಿತ್ರರು ಸಹ ಕೈಕಟ್ಟಿ ಕುಳಿತ್ತಿದ್ದದ್ದು ವಿರ್ಪಯಾಸ.

ಬಂದ್ ಮಾಡಲು ಚಿಂತನೆ

ರಾಜ್ಯದ ವಿವಿಧೆಡೆ ಬಹುತೇಕ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಕೋವಿಡ್ ನೆಗೆಟಿವ್ ರಿರ್ಪೋಟ್ ಇದ್ದರಷ್ಟೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಬಿಡಲಾಗುತ್ತಿದೆ. ಹೀಗೆ ಅನೇಕ ರೂಲ್ಸ್ಗಳನ್ನು ಆಯಾ ಜಿಲ್ಲಾಡಳಿತ ವಿಧಿಸಿದೆ. ಅದೇ ಮಾದರಿಯಲ್ಲಿ ಸೋಮವಾರ ಅಕಾರಿಗಳ ಸಭೆ ನಡೆಸಿರುವ ಜಿಲ್ಲಾಕಾರಿ ಕೆ.ರಾಕೇಶ್, ಅತೀ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುವ ತಾಣಗಳನ್ನು ಬಂದ್ ಮಾಡಲು ಚಿಂತನೆ ನಡೆಸಿದ್ದಾರೆ.

ಪ್ರವಾಸಿ ತಾಣಗಳು ಬಂದ್ ಆದರೆ, ಅನೇಕ ಕುಟುಂಬಗಳು ಮತ್ತೆ ಬೀದಿಗೆ ಬೀಳಲಿದೆ. ಆದರೆ, ಮುಂದುವರಿದರೆ ಕೋವಿಡ್ ಸೋಂಕು ಹೆಚ್ಚಾಗಲಿದೆ. ಅಡ್ಡಕತ್ತರಿಯಲ್ಲಿ ಸಿಲುಕಿರುವ ಜಿಲ್ಲಾಡಳಿತ ಪ್ರವಾಸಿ ತಾಣಗಳ ಮೇಲೆ ಹಿಡಿತ ಸಾಸಲು ತವಕಿಸುತ್ತಿದೆ. ಇನ್ನೊಂದೆಡೆ ಕೋವಿಡ್ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಉಳಿದಿದ್ದ ಪ್ರವಾಸಿಗರು ವಾರಂತ್ಯದ ರಜೆ ದಿನಗಳಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿರುವುದು ತಪ್ಪಲ್ಲ. ಆದರೆ, ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿರುವುದು ಕೋವಿಡ್ ದಾಳಿಗೆ ದಾರಿಯಾಗಿದೆ.

ಭಾನುವಾರ ಕೋವಿಡ್ ನಿಯಮಗಳು ಸಂಪೂರ್ಣ ಉಲ್ಲಂಘನೆಯಾಗಿದೆ. ಪ್ರವಾಸಿ ತಾಣಗಳು ತುಂಬಿ ತುಳುಕಿವೆ. ಅಲ್ಲಿಯು ಕೋವಿಡ್ ನಿಯಮ ಪಾಲನೆಯಾಗಿಲ್ಲಘಿ. ಹೀಗಾಗಿ ಬೆಳಗ್ಗೆ ಅಕಾರಿಗಳ ಸಭೆ ನಡೆಸಿ, ಮುಂದಿನ ಯೋಜನೆಗಳ ಬಗ್ಗೆ ಚರ್ಚಿಸಲಾಗಿದೆ. ಅತೀ ಹೆಚ್ಚಿನ ಪ್ರವಾಸಿಗರು ಬರುವ ತಾಣಗಳಿಗೆ ನಿರ್ಬಂಧ ವಿಧಿಸಿಲು ಚಿಂತಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button