ರಾಮನಗರ

ಕನಕಪುರ: ವಿದ್ಯುತ್ ಪ್ರವಹಿಸಿ, ರೈತ, ಕರು ಸಾವು

ರಾಮನಗರ: ಜಮೀನು ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ವಿದ್ಯುತ್ ಪ್ರವಹಿಸಿ, ಹಸುವಿನ ಕರುವನ್ನು ರಕ್ಷಣೆ ಮಾಡಲು ಹೋದ ರೈತ ಕರುವಿನೊಂದಿಗೆ ತಾನೂ ಸಾವಿಗೀಡಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.

ಕನಕಪುರ ತಾಲೂಕಿನ ಚಾಕನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗೌಡಹಳ್ಳಿ ಗ್ರಾಮದ ಶಿವರಾಜು(೪೬) ಮೃತ ರೈತ. ಈತ ಕೂಲಿ‌ ಕಾರ್ಮಿಕನಾಗಿದ್ದ ಶಿವರಾಜು, ಇತ್ತಚೀಗೆ ಚಾಕನಹಳ್ಳಿ ಗ್ರಾಮದ ಕುಂಟರಾಮಣ್ಣ ಎಂಬುವರ ಜಮೀನನ್ನು ಗುತ್ತಿಗೆ ಹಿಡಿದು ಬೇಸಾಯ ಮಾಡುತ್ತಿದ್ದರು. ತಾನು ಸಾಕಿದ ಹಸುವಿನ ಕರು ತಂತಿ ಬೇಲಿಯನ್ನು ನೆಗೆಯಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ರಕ್ಷಣೆ ಮಾಡಲು ಹೋದಾಗ ಕರುವಿನ ಜೊತೆಗೆ ಶಿವರಾಜು ಇಬ್ಬರಿಗೂ ಕೂಡ ವಿದ್ಯುತ್ ಪ್ರವಹಿಸಿದೆ.

ಸ್ಥಳಕ್ಕೆ ಗ್ರಾಮಾಂತರ ಪಿಎಸ್ಐ ಹೇಮಂತ್ ಕುಮಾರ್ ಹಾಗೂ ಬೇಸ್ಕಾಂ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕನಕಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Spread the love

Related Articles

Leave a Reply

Your email address will not be published. Required fields are marked *

Back to top button