ರಾಮನಗರ

ಚನ್ನಪಟ್ಟಣದ ಗೊಂಬೆ ಮಾರಾಟಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸಿ : ಅಶ್ವಿನ್ ಡಿ ಗೌಡ

ರಾಮನಗರ: ಚನ್ನಪಟ್ಟಣದ ಗೊಂಬೆಕಲೆಯನ್ನು ಹೆಚ್ಚು ಜನಪ್ರಿಯಾ ಮಾಡಲು ಹಾಗೂ ಚನ್ನಪಟ್ಟಣದ ಗೊಂಬೆಯನ್ನು ತಯಾರಿಸುವ ಉದ್ದಿಮೆಯಲ್ಲಿ ತೊಡಗಿಕೊಳ್ಳುವವರು ಗೊಂಬೆ ಮಾರಾಟ ಮಾಡಿ ಹೆಚ್ಚು ಆದಾಯಗಳಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಡಿ ಗೌಡ ಅವರು ತಿಳಿಸಿದರು.

ಅವರು ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದಿಂದ ಅಖಿಲ ಭಾರತ ಕರಕುಶಲ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ, ಚನ್ನಪಟ್ಟಣದ ಅರಗಿನ ಗೊಂಬೆಕಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು. ಗೊಂಬೆಕಲೆಯಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ಆದಾಯ ಹೆಚ್ಚಿಸಲು ವಿವಿಧ ತರಬೇತಿಗಳನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಚನ್ನಪಟ್ಟಣ ಕ್ರಫ್ಟ್ ಪಾರ್ಕಿನಲ್ಲಿ ತಯಾರಿಕೆಯಾಗುವ ವಸ್ತುಗಳ ಮೇಲೆ ಮೇಕ್ ಇನ್ ಇಂಡಿಯಾ ಲೊಗೋ ಬಳಸಿ ಮಾರಾಟಕ್ಕಾಗಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸ್ಕಿಲ್ ಔಟ್‌ಲೆಟ್ ವ್ಯವಸ್ಥೆ ಮಾಡಿಕೊಳ್ಳಿ ಎಂದರು.

ಕರ್ನಾಟಕ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದಿಂದ 37 ವಲಯದಲ್ಲಿ 150 ಕ್ಕೂ ಹೆಚ್ಚು ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ರಾಜ್ಯಾದ್ಯಂತ ಗೊಂಬೆಗಳ ತಯಾರಿಕೆಯ ನಂತರ ಕೇವಲ 10 ಜನ ಮಾತ್ರ ಗೊಂಬೆಗಳ ಮೇಲೆ ಬಣ್ಣ ಹಚ್ಚುವ ಕೌಶಲ್ಯ ಹೊಂದಿರುತ್ತಾರೆ. ಈ ಹಿನ್ನಲೆಯಲ್ಲಿ ಗೊಂಬೆಗಳಿಗೆ ಬಣ್ಣ ಹಚ್ಚುವ ತರಬೇತಿ ನೀಡಲಾಗುವುದು. ತರಬೇತಿಯ ನಂತರ ತಯಾರಿಕ ಘಟಕಗಳಲ್ಲಿ ಅವರಿಗೆ ಕೆಲಸ ಸಹ ಸಿಗಲಿದೆ. ಸ್ವಂತ ಉದ್ದಿಮೆ ಪ್ರಾರಂಭಿಸಲು ಬೇಕಿರುವ ತರಬೇತಿಯನ್ನು ಸಹ ನೀಡಲಾಗುವುದು ಎಂದರು.

ಚನ್ನಪಟ್ಟಣ ಕ್ರಾಫ್ಟ್ ಪಾರ್ಕಿನ ಸ್ವತಂತ್ರ ನಿರ್ದೇಶಕಿ ಶ್ರೀಕಲ ಕಡಿದಾಳ್ ಮಾತನಾಡಿ ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ ನ್ನು ಭಾರತ ಸರ್ಕಾರದ ಅನುದಾನದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಆಸಕ್ತ ಸುತ್ತ ಮುತ್ತಲಿನ ಜನರಿಗೆ ತರಬೇತಿ ಭತ್ಯೆಯೊಂದಿಗೆ ತರಬೇತಿ ನೀಡಲಾಗುವುದು. ವಿವಿಧ ರೀತಿಯ ಹೊಸ ವಿನ್ಯಾಸದೊಂದಿಗೆ ಗೊಂಬೆ ತಯಾರಿಸಲು ಸಹ ತರಬೇತಿ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕರಕುಶಲ ವಿಭಾಗದ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಚನ್ನಪಟ್ಟಣ ಕ್ರಾಫ್ಟ್ ಪಾರ್ಕ್ ಕಾರ್ಯದರ್ಶಿ ಭೂಪತಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button