ಕ್ರಿಶ್ಚಿಯನ್ ಮತಾಂತರ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು: ಪ್ರಮೋದ್ ಮುತಾಲಿಕ್

ಧಾರವಾಡ: ಇತ್ತೀಚೆಗೆ ಕ್ರಿಶ್ಚಿಯನ್ ಮತಾಂತರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ಈಗ ರಾಜ್ಯದಲ್ಲಿ ನಡೆಯುತ್ತಿವೆ. ಇದರ ಕುರಿತು ಕಳೆದ ಅಧಿವೇಶನದಲ್ಲೂ ಕೂಡಾ ಚರ್ಚೆಗಳು ಆಗಿವೆ. ಕ್ರಿಶ್ಚಿಯನ್‌ರು ಬ್ರಿಟಿಷರ್ ಕಾಲದಿಂದಲೂ ಮತಾಂತರ ಮಾಡುತ್ತಲೇ ಬರುತ್ತಿದ್ದಾರೆ. ಹಾಗಾಗಿ ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಮತಾಂತರಿಗಳ ವಿರುದ್ಧ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದರು.
ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಳೆದ ಅಧಿವೇಶನದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಮತಾಂತದ ಕುರಿತು ಧ್ವನಿ ಎತ್ತಿದ್ದಾರೆ. ಗೂಳಿಹಟ್ಟಿಯವರ ತಾಯಿಯವರು 10 ವರ್ಷದಿಂದ ಮತಾಂತರ, ಪ್ರಾರ್ಥನೆಯನ್ನು ನಡೆಸುತ್ತಿರುವ ಬಗ್ಗೆ ಆರ್‌ಎಸ್‌ಎಸ್ ಕೂಡಾ ಹೇಳಿದೆ. ಕ್ರಿಶ್ಚಿಯನ್ನರು ಇತ್ತೀಚೆಗೆ ಮತಾಂತರದಲ್ಕಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಇದಕ್ಕೆ ಒಂದು ಕಠಿಣ ಕಾಯ್ದೆ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ರಾಜ್ಯ ಸರ್ಕಾರ ನಾವು ಗೋ ಹತ್ಯೆ ತಡೆಯುತ್ತೇವೆ ಎಂದು, ಗೋಹತ್ಯೆ ಕಾನೂನು ಜಾರಿ ಮಾಡಿತ್ತು. ಆದರೆ ಇಂದಿಗೂ ರಾಜ್ಯದಲ್ಲಿ ಗೋಹತ್ಯೆ ನಡೆಯುತ್ತಲೇ ಇದೆ. ಗೋಕಳ್ಳತನ, ಗೋಮಾಂಸ ಮಾರಾಟ ನಿರಂತರವಾಗಿ ನಡೆಯುತ್ತಿವೆ. ಈ ರೀತಿಯ ಮತಾಂತರ ನೀಷೇಧ ಕಾನೂನು ತಂದರೆ ಆಗುವುದಿಲ್ಲ. ಕಠಿಣ ಕಾನೂನು ತರವುದರ ಜೊತೆಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಎಲ್ಲೆಲ್ಲಿ ಮತಾಂತರ ನಡೆಯುತ್ತದೆ, ಅದನ್ನು ಸರ್ವೆ ಮಾಡಬೇಕು. ಸರ್ಕಾರ, ಪೊಲೀಸ್ ಇಲಾಖೆ ಎಲ್ಲರೂ ಸೇರಿ ಇದರ ಬಗ್ಗೆ ವಿಚಾರ ಮಾಡಿ, ಕಾಯ್ದೆಯನ್ನು ಜಾರಿಗೆ ತರಬೇಕು ಎಂದರು.




