ಜಿಲ್ಲಾ ಸುದ್ದಿ

ಉಡುಪಿ ಜಿಲ್ಲೆ ಗಡಿ ಪ್ರದೇಶದಲ್ಲಿ ಅನಗತ್ಯ ವಾಹನ ಓಡಾಟಕ್ಕೆ ಕಡಿವಾಣ

ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಇದೀಗ ಅನಗತ್ಯ ವಾಹನ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಜಿಲ್ಲೆಯ ಶಿರೂರು ಟೊಲ್ ಗೇಟ್ ಬಳಿ ಪೋಲಿಸರ ಕಾರ್ಯಚರಣೆ ಇದೀಗ ಭರದಿಂದ ಸಾಗುತ್ತಿದ್ದು ಅನಗತ್ಯ ಓಡಾಡುತ್ತಿರುವ ಅವರ ಮೇಲೆ ಕ್ರಮ ಕೈಗೊಂಡಿದ್ದಾರೆ.

ಭಟ್ಕಳ ಕಡೆಯಿಂದ ದಿನನಿತ್ಯ ಅನಗತ್ಯವಾಗಿ ತಿರುಗಾಡುತ್ತಿರುವ ವಾಹನಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಆಸ್ಪತ್ರೆಗೆಂದು ನೆಪ ಹೇಳಿ ಬರುವ ವಾಹನ ಸವಾರರಿಗೆ ವಾರ್ನ ಮಾಡಿ ತರಾಟೆಗೆ ತೆಗೆದುಕೊಂಡ ಪೋಲಿಸ್ ಸಿಬ್ಬಂದಿ, ಅನಗತ್ಯವಾಗಿ ಸುತ್ತುವ ವಾಹನ ಸವಾರರನ್ನು ವಾಪಾಸ್ಸು ಕಳಿಸಿ ಬುದ್ದಿ ಕಲಿಸಿದ್ದಾರೆ ಹಾಗೂ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದ್ದು ಅನಗತ್ಯವಾಗಿ ಓಡಾಟ ಮಾಡುವರನ್ನು ತರಾಟೆಗೆ ತೆಗೆದುಕೊಂಡು ಕೆಲವೊಂದು ವಾಹನಗಳನ್ನು ಸೀಝ್ ಮಾಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button