ಜಿಲ್ಲಾ ಸುದ್ದಿರಾಜ್ಯಸುದ್ದಿಹುಬ್ಬಳ್ಳಿ - ಧಾರವಾಡ
ಪೊಲೀಸ್ ಗೌರವಗಳೊಂದಿಗೆ ಚೆಂಬಳಕಿನ ಕವಿಯ ಅಂತ್ಯಕ್ರಿಯೆ

ಧಾರವಾಡ: ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿಯವರ ಅಂತ್ಯಕ್ರಿಯ ಧಾರವಾಡದ ಅವರ ಸೃಷ್ಠಿ ಫಾರ್ಮ್ ಹೌಸ್ನಲ್ಲಿ ನಡೆಯಿತು. ಕಣವಿಯವರ ಪುತ್ರ ಶಿವಾನಂದ ಹಾಗೂ ಕುಟುಂಬದ ಸದಸ್ಯರು ಅಂತಿಮವಾಗಿ ಪೂಜೆ ಸಲ್ಲಿಸಿದರು. ಬಳಿಕ ಪೊಲೀಸರು ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳನ್ನ ಸಮರ್ಪಿಸಿದರು.
ವೀರಶೈವ ಸಂಪ್ರದಾಯದಂತೆ ಅಂತ್ಯಕ್ರಿಯೆ.
ಕಣವಿಯವರ ಆಶಯದಂತೆ ಸೃಷ್ಠಿ ಫಾರ್ಮಹೌಸನ ಪತ್ನಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆಯನ್ನು ನೇರವೇರಿಸಲಾಯ್ತು. ವೀರಶೈವ ಸಂಪ್ರದಾಯದಂತೆ ಹಿರಿಯ ಪುತ್ರ ಶಿವಾನಂದ್ ಅಂತಿ ವಿಧಿ ವಿಧಾನ ಕಾರ್ಯಗಳನ್ನ ನೆರವೇರಿಸಿದರು.
ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ್ರವರು ಕಣವಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗುವ ಮೂಲಕ ಅಗಲಿದ ಹಿರಿಯ ಕವಿಗೆ ಗೌರವ ನಮನ ಸಲ್ಲಿಸಿದರು.




