ಕಲಬುರ್ಗಿಜಿಲ್ಲಾ ಸುದ್ದಿ
ಕಲಬುರಗಿಯಲ್ಲಿ ಹಿಜಾಬ್‌ಗೆ ವಿರೋಧ: ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕಲಬುರಗಿ: ಹಿಜಾಬ್ ವಿರೋಧಿಸಿ ಶ್ರೀರಾಮ ಸೇನೆ ವಿದ್ಯಾರ್ಥಿ ಘಟಕ ನಗರದ ಎಸ್‌ವಿಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿದ್ದಾರೆ.
ಆಂದೋಲಾ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕೇಸರಿ ಶಾಲು ಧರಿಸಿ ಪ್ರತಿಭಟನಾ ಱಲಿ ನಡೆಸಿದ ನೂರಾರು ಜನ ವಿದ್ಯಾರ್ಥಿಗಳು, ಬೇಡವೇ ಬೇಡ ಹಿಜಾಬ್ ಬೇಡಾ, ಬುರ್ಖಾ ಬೇಡ ಎಂದು ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ಆಂದೋಲ ಶ್ರೀ, ಹಿಜಾಬ್ ಧರಿಸಿ ವಿಧಾನಸೌಧಕ್ಕೆ ಹೋಗುತ್ತೇನೆ ತಾಕತ್ತಿದ್ರೆ ತಡಿರಿ ಎಂಬ ಶಾಸಕಿ ಖನೀಜ್ ಫಾತಿಮಾ ಹೇಳಿಕೆಗೆ ಕಿಡಿಕಾರಿದ್ದಾರೆ. ಕೋಮುಗಲಭೆ ಕೆರಳಿಸುವಂತಹ ಹೇಳಿಕೆ ಶಾಸಕಿ ಖನೀಜ್ ಫಾತೀಮಾ ನೀಡಿದ್ದು, ಅವರ ಮತ್ತೊಂದು ಮುಖ ಅನಾವರಣವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇಷ್ಟು ದಿವಸ ಶಾಸಕಿ ಫಾತೀಮಾ ಅವರು ವಿಧಾನಸೌದಕ್ಕೆ ಹಾಗೆ ಹೋಗಿದ್ರ. ಚೂಡಿದಾರ ಧರಿಸಿ ಹೋಗಿದ್ರಾ ಅಥವಾಸೀರೆ ಧರಿಸಿಕೊಂಡು ಹೋಗಿದ್ರಾ? ಎಂಬ ವಿವಾದಾತ್ಮಕ ಪ್ರಶ್ನೆ ಮಾಡಿದ್ದಾರೆ.




