Breaking NewsLatestಮೈಸೂರು
ಸಿಎಂ ಮನೆ ಹಿಂಭಾಗದ ಗೆಸ್ಟ್ಹೌಸ್ನಲ್ಲೇ ವಿಜಯೇಂದ್ರ ಡೀಲ್: ಯತ್ನಾಳ್

ಮೈಸೂರು: ಬಿ ವೈ ವಿಜಯೇಂದ್ರ ಡೀಲ್ ಮಾಡುವ ಸ್ಥಳವಾಗಿರುವ ಮುಖ್ಯಮಂತ್ರಿಗಳ ನಿವಾಸ ಕಾವೇರಿ ಹಿಂಭಾಗದ ಗೆಸ್ಟ್‌ಹೌಸ್ ಮೇಲೂ ಸಿಸಿಬಿ ದಾಳಿ ಮಾಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಿವಾಸದ ಹಿಂಭಾಗದ ಗೆಸ್ಟ್‌ಹೌಸ್ ಮೇಲೂ ಸಿಸಿಬಿ ದಾಳಿಯಾಗಬೇಕು. ವಿಜಯೇಂದ್ರ ಅವರು ಎಲ್ಲಾ ಡೀಲ್ ಮಾಡುವ ಸ್ಥಳ ಅದು ಎಂದು ಹರಿಹಾಯ್ದರು.
