ಕಲಬುರ್ಗಿ

ಕಲಬುರಗಿ ಶರಣಬಸವೇಶ್ವರ ದೇವಸ್ಥಾನ ಓಪನ್: ದರ್ಶನಕ್ಕೆ ಭಕ್ತರ ದಂಡು

ಕಲಬುರಗಿ: ಬರೋಬ್ಬರಿ ಎರಡೂವರೆ ತಿಂಗಳ ಬಳಿಕ ಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದ ಗರ್ಭಗೂಡಿ ಬಾಗಿಲು ತೆರೆದಿದೆ. ಇಂದು ಸೋಮವಾರ ಶರಣಬಸವೇಶ್ವರರ ವಾರ ಇರುವುದರಿಂದ ಭಕ್ತರ ದಂಡೇ ದೇವಸ್ಥಾನದತ್ತ ಹರಿದುಬರುತ್ತಿದೆ.

ಎರಡೂವರೆ ತಿಂಗಳ ಬಳಿಕ ರಾಜ್ಯ ಸರ್ಕಾರ ಅನ್ ಲಾಕ್ 3.0 ಜಾರಿಗೊಳಿಸಿ ಆದೇಶ ಹೊರಡಿಸಿದ ಹಿನ್ನೆಲೆ ರಾಜ್ಯದಾದ್ಯಂತ ಎಲ್ಲಾ ದೇವಸ್ಥಾನ ದರ್ಶಕ್ಕೆ ಮುಕ್ತವಾಗಲಿವೆ. ಕಲಬುರಗಿಯಲ್ಲಿಯೂ ಅನ್‌ಲಾಕ್ ಬಳಿಕ ಶರಣಬಸವೇಶ್ವರ ದೇವಸ್ಥಾನದಲ್ಲಿ ದರ್ಶನ ಅನುಮತಿ ಕಲ್ಪಿಸಲಾಗಿದೆ.

ಇಂದು ಬೆಳಗ್ಗೆ 6 ಗಂಟೆಯಿಂದಲೇ ಶ್ರೀ ಶರಣಬಸವೇಶ್ವರ ದೇವಸ್ಥಾನ ಓಪನ್ ಆಗಿದ್ದು, ಭಕ್ತರು ದಂಡು‌ ದೇವಸ್ಥಾನದತ್ತ ಬರುತ್ತಿದೆ. ಸಾಮಾಜಿಕ ಅಂತರಕ್ಕೆ ಹೆಚ್ಚಿನ ಆದ್ಯತೆ ನೀಡಿ ದೇವಸ್ಥಾನದಲ್ಲಿ ಮಾರ್ಕೌಟ್ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ‌. ಮಾಸ್ಕ್ ಹಾಕದೇ ಬರುವ ಭಕ್ತರಿಗೆ ದೇವಸ್ಥಾನದಲ್ಲಿ ಪ್ರವೇಶ ನಿಷೇಧಿಸಲಾಗಿದೆ.

ಭಕ್ತರು ಸಹ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಶರಣರ ದರ್ಶನ ಪಡೆಯುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button