Breaking Newsಜಿಲ್ಲಾ ಸುದ್ದಿರಾಜಕೀಯಹುಬ್ಬಳ್ಳಿ - ಧಾರವಾಡ

ಮಹದಾಯಿಗೂ ನನಗೂ ಸಂಬಂಧವಿಲ್ಲ: ಪತ್ರಕರ್ತರ ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಮಾಧುಸ್ವಾಮಿ

ಧಾರವಾಡ: ಮಹದಾಯಿಗೂ ನನ್ನ ಸಣ್ಣ ನೀರಾವರಿ ಇಲಾಖೆಗೂ ಸಂಬಂಧವಿಲ್ಲ. ಎಲ್ಲೆಲ್ಲಿ ಎನೇನೂ ನಡೆಸಬೇಕು ಹಾಗೂ ಮಾಡಬೇಕು ಎನ್ನುವುದಕ್ಕೆ ಸರ್ಕಾರವಿದೆ. ನೀವು ಅದನ್ನು ಯಾಕೆ ಮಾಡುತ್ತೀರಿ, ಇದನ್ನ ಯಾಕೆ ಮಾಡುತ್ತೀರಾ ಅಂತಾ ಕೇಳುವ ಹಕ್ಕು ನಿಮಗೆ ಇಲ್ಲ. ಮಹದಾಯಿ ಬಗ್ಗೆ ಕ್ಲಿಯರೆನ್ಸ್ ಸಿಕ್ಕ ಮೇಲೆ ಬಂಡವಾಳ ಹಾಕಲಾಗುವುದು ಎನ್ನುವ ಮೂಲಕ ಪತ್ರಕರ್ತರ ಮಹಾದಾಯಿ ಪ್ರಶ್ನೆಗಳಿಗೆ ಸಚಿವ ಮಾಧುಸ್ವಾಮಿ ಕೋಪದಲ್ಲಿಯೇ ಉತ್ತರ ನೀಡಿದರು.

ಧಾರವಾಡದ ಅಳ್ನಾವರ ಬಳಿಯ ಇಂದಿರಮ್ಮನ ಕೆರೆಯ ಅತಿವೃಷ್ಟಿ ಹಾನಿ ವೀಕ್ಷಣೆ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದಿನಿಂದಲೂ ಮಹದಾಯಿ ಬಗ್ಗೆ ಹೋರಾಟ ಮಾಡಿದದವರೇ ಈಗ ಮುಖ್ಯಮಂತ್ರಿ ಆಗಿದ್ದಾರೆ. ಮಹದಾಯಿ ಕುರಿತಂತೆ ಹಲವು ಬಾರಿ ಟ್ರಿಬ್ಯುನಲ್ ಮುಂದೆ ಹೊಗಿದ್ದೇವೆ, ಅಲ್ಲದೆ ಕಳೆದ ವಾರವು ಸಹಿತ ಮಹದಾಯಿ ವಿಚಾರವನ್ನು ಕ್ಲಿಯರ್ ಮಾಡುವಂತೆ ಟ್ರಿಬ್ಯುನಲ್ ಮೊರೆ ಹೊಗಿದ್ದೇವೆ. ನಾನು, ಮುಖ್ಯಂಮತ್ರಿ ಬೊಮ್ಮಾಯಿ ಅವರು ಸೇರಿದಂತೆ ಸಚಿವ ಗೋವಿಂದ ಕಾರಜೋಳ ಕೂಡಿಕೊಂಡು ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಕ್ಲಿಯರೆನ್ಸ್ ಸಿಕ್ಕ ಕೂಡಲೇ ಯಾರದೇ ದಯೆ ದಾಕ್ಷಣ್ಯವಿಲ್ಲದೆ ಬಂಡವಾಳ ಹೂಡುತ್ತೆವೆ ಎಂದರು.

ಅತಿವೃಷ್ಟಿಯಲ್ಲಿ ಹಾನಿಯಾದ ಎಲ್ಲವನ್ನೂ ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ಪ್ರಯತ್ನಿಸುತ್ತೇವೆ:

ಧಾರವಾಡ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಯಾದ ಪ್ರದೇಶಗಳಿಗೆ ಇಂದು ಭೇಟಿ ನೀಡುತ್ತಾ ಬಂದಿದ್ದೇವೆ. ಈ ಕುರಿತು ನಮ್ಮ ಇಂಜಿನಿಯರ್‌ಗಳು ಸ್ಥಳದಲ್ಲಿ ಹಾಜರಿದ್ದು ಮಾಹಿತಿಯನ್ನು ನೀಡಿದ್ದಾರೆ. ಅಧಿಕಾರಿಗಳ ಮಾಹಿತಿ ಮೇರೆಗೆ ಸ್ಥಳ ವೀಕ್ಷಣೆಗೆ ಬಂದಿದ್ದೇನೆ. ಆದಷ್ಟು ಬೇಗ ಹಾನಿ ಪ್ರದೇಶಗಳನ್ನು ಮಾಮೂಲಿ ಸ್ಥತಿಗೆ ತರಲು ಪ್ರಯತ್ನಿಸುತ್ತೇನೆ ಎಂದರು.‌

ಧಾರವಾಡ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಹಳೆ ಕಾಮಗಾರಿಗಳನ್ನು ತೋರಿಸಿ ಬಿಲ್‌ಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗ ನಮ್ಮ ಗಮನಕ್ಕೆ ನೀವು ತಂದಿದ್ದೀರಾ. ಅದರ ಕುರಿತು ಏನಾದರೂ ದಾಖಲೆಗಳು ಇದ್ದರೆ ನೀಡಿ. ಅದರ ಕುರಿತು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು‌ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button