ಜಿಲ್ಲಾ ಸುದ್ದಿಮಂಡ್ಯ

ಶಾಲೆ ಆರಂಭ ಹಿನ್ನೆಲೆ : ವಿದ್ಯಾರ್ಥಿಗಳಿಗೆ ಹೂ, ಚಾಕೊಲೇಟ್, ಮಾಸ್ಕ್ ನೀಡಿ ಸ್ವಾಗತ

ಮಂಡ್ಯ : ಇಂದಿನಿಂದ ಶಾಲೆಗಳು ಆರಂಭಗೊಂಡಿವೆ. ಈ ಮೊದಲು‌ ಶಾಲೆಗೆ ಹೋಗಲು‌ ಮಕ್ಕಳು ಇಂದು- ಮುಂದು ನೋಡುತ್ತಿದ್ದರು. ಆದರೆ ಈಗ ಶಾಲೆಗಳು ಆರಂಭವಾಗುತ್ತಿದ್ದಂತೆ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ.

ಸಚಿವ ಕೆ.ಸಿ. ನಾರಾಯಣಗೌಡ ಇಂದು ಹಲವು ಶಾಲೆಗಳಿಗೆ ಭೇಟಿ ನೀಡಿ ಸ್ಯಾನಿಟೈಸರ್ ಆಗಿದೆಯಾ, ಶುಚಿತ್ವ ಇದೆಯಾ ಎಂದೆಲ್ಲಾ ಪರಿಶೀಲಿಸಿದ್ರು. ಅಲ್ಲದೆ, ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನಿಗಾ ವಹಿಸಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಿದರು.

ಇನ್ನು ವಿದ್ಯಾರ್ಥಿಗಳು ಹಬ್ಬದ ಸಡಗರವನ್ನು ಯಾವ ರೀತಿ ಆಚರಿಸುತ್ತಾರೋ ಅದೇ ರೀತಿ ಶಾಲೆಗೆ ಕುಣಿದು ಕುಪ್ಪಳಿಸುತ್ತಾ ಆಗಮಿಸಿದ್ದು ವಿಶೇಷ. ಹೀಗೆ ಬಂದಂತಹ ವಿದ್ಯಾರ್ಥಿಗಳಿಗೆ ಸಚಿವರು ಹೂ, ಚಾಕೊಲೇಟ್ ಹಾಗೂ ಮಾಸ್ಕ್ ಗಳನ್ನು ನೀಡಿ ಬರಮಾಡಿಕೊಂಡರಲ್ಲದೆ, ವಿದ್ಯೆಯ ಜೊತೆ ಆಟೋಟಗಳಲ್ಲಿ ಪಾಲ್ಗೊಂಡು ನಾಡಿಗೆ ಹೆಸರು ತರಬೇಕಲ್ಲದೆ ಕರೊನಾ ಮಹಾಮಾರಿ ಹೋಗಲಾಡಿಸಲು ಎಚ್ಚರಿಕೆಯಿಂದಿರಬೇಕೆಂದು ಕಿವಿ ಮಾತು ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button