ರಾಜ್ಯಾದ್ಯಂತ ಶಾಲೆ ಆರಂಭ ಹಿನ್ನಲೆ; ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡಿ ಸ್ವಾಗತ

ಧಾರವಾಡ: ರಾಜ್ಯದಲ್ಲಿ ಕೊರೊನಾ ಮಾಹಾಮಾರಿ ಎರಡನೇ ಅಲೆ ತಗ್ಗಿದ ಬಳಿಕ ಈಗ ರಾಜ್ಯ ಸರ್ಕಾರ ಶಾಲೆಗಳನ್ನು ಇಂದಿನಿಂದ ಆರಂಭ ಮಾಡಿದ್ದು, ಈ ಹಿನ್ನೆಲೆಯಲ್ಲಿ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಹುಬ್ಬಳ್ಳಿಯಲ್ಲಿ ಗುಲಾಬಿ ಹೂ ನೀಡುವ ಮೂಲಕ ಶಿಕ್ಷಕರು ಸ್ವಾಗತ ಮಾಡಿಕೊಂಡರು.
ಹುಬ್ಬಳ್ಳಿಯ ಸೇಂಟ್ ಮ್ಯಾರಿಸ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕರು ರೆಡ್ ರೋಸ್ ನೀಡಿ ಸ್ವಾಗತಿಸಿದ್ದು, ಶಿಕ್ಷರ ವಿಭಿನ್ನ ಸ್ವಾಗತಕ್ಕೆ ವಿದ್ಯಾರ್ಥಿಗಳು ಸ್ಮೈಲ್ ಮಾಡಿಕೊಂಡೇ ಮೆಚ್ಚುಗೆ ವ್ಯಕ್ತಪಡಿಸಿ ತರಗತಿಗಳಿಗೆ ತೆರಳಿದರು. ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಹಾಗೂ ಕೊರೊನಾ ಮೂರನೇ ಅಲೆ ತಡೆಯುವ ದೃಷ್ಠಿಯಿಂದ ಶಾಲೆಯಲ್ಲಿ ಶಿಕ್ಷರು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ತರಗತಿಗಳಿಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಶಾಲೆಯ ಸಿಬ್ಬಂದಿಗಳು ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಬಳಿಕ ಹ್ಯಾಡ್ ಸ್ಯಾನಿಟೈಸ್ ನೀಡಿ, ಜೊತೆಗೆ ಮಾಸ್ಕ್ ಹಾಗೂ ಸಮಾಜಿಕ ಅಂತರ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಕರು ತಿಳಿ ಹೇಳಿದರು.
ರಾಜ್ಯ ಸರ್ಕಾರ ಇಂದಿನಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಆರಂಭಿಸಿಲು ಆದೇಶ ಹೋರಡಿಸಿದ್ದು, ಈ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯ ಬಹುತೇಕ ಶಾಲೆಗಳು ತಮ್ಮ ತಮ್ಮ ಕಾರ್ಯವನ್ನು ಆರಂಭಿಸಿವೆ. ಕೊರೊನಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ವಿಭಿನ್ನವಾಗಿ ಸ್ವಾಗತ ಮಾಡಿಕೊಂಡು ತರಗತಿಗಳನ್ನು ಆರಂಭಿಸಿದ್ದಾರೆ.




