ತಮ್ಮನಿಗೆ ರೈಲ್ವೆ ಪೊಲೀಸರು ದಂಡ ಹಾಕಿದಕ್ಕೆ ರೊಚ್ಚಿಗೆದ್ದ ಅಣ್ಣ ಮಾಡಿದ್ದೇನು ಗೊತ್ತಾ?

ಕಲಬುರಗಿ: ರೈಲಿನಲ್ಲಿ ಸಿಗರೇಟ್ ಸೇದುತ್ತಿದ್ದ ತನ್ನ ಸಹೋದರನಿಗೆ ಫೈನ್ ಹಾಕಿದ್ದಕ್ಕೆ ಆಕ್ರೋಶಗೊಂಡ ಆತನ ಹಿರಿಯ ಸಹೋದರ ರೈಲ್ವೆ ಕಂಟ್ರೋಲ್ ರೂಮ್ಗೆ ಕರೆ ಮಾಡಿ ದೆಹಲಿಯಿಂದ ಕರ್ನಾಟಕಕ್ಕೆ ಹೊರಟ ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿದ್ದು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ದೆಹಲಿ ಮೂಲದ ಸತ್ಯಾ ಅಲಿಯಾಸ್ ಸತೀಶ ಎನ್ನುವಾತನೆ ಆಗ್ರಾ ರೈಲ್ವೆ ಪೋಲಿಸ್ ಕಂಟ್ರೋಲ್ ರೂಮ್ಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದಾನೆ. ರೈಲಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಧಮ್ಕಿ ಹಾಕಿದ್ದ ಸತ್ಯಾನ ಸಹೋದರ ದೇಹಲಿಯಿಂದ ಬೆಂಗಳೂರಿಗೆ ಹೊರಟಿದ್ದ. ಆಗ್ರಾದ ರೈಲು ನಿಲ್ದಾಣದಲ್ಲಿ ಆತನ ಸಹೋದರ ಸಿಗರೇಟ್ ಸೇದುವಾಗ ಟಿಟಿ ಒಬ್ಬರು ದಂಡ ವಿಧಿಸಿದ್ದಾರೆ.
ಆ ವ್ಯಕ್ತಿಯ ಬಳಿ ಹಣ ಇಲ್ಲದ ಕಾರಣ ಆತನ ಸಹೋದರನಿಗೆ ಕರೆ ಮಾಡಿ ಪೋನ್ ಪೇ ಮಾಡಿಸಿಕೊಂಡ ದಂಡ ಕಟ್ಟಿದ್ದಾನೆ. ಬಳಿಕ ಟ್ರೈನ್ ಆಗ್ರಾದಿಂದ ಮುಂದೆ ಸಾಗಿತ್ತಿದ್ದಂತೆ ಆತ ಮತ್ತೆ ತನ್ನ ಸಹೋದರನಿಗೆ ಪೋನ್ ಮಾಡಿ ತನಗಾದ ಅವಮಾನವನ್ನು ವಿವರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆತನ ಸಹೋದರ ಕುಡಿದ ಅಮಲಿನಲ್ಲಿ ಆಗ್ರಾ ಕಂಟ್ರೋಲ್ ರೋಮ್ ಗೆ ಕರೆ ಮಾಡಿ ನಾನು ಕೆಕೆ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟಿದ್ದೇನೆ ಬ್ಲಾಸ್ಟ್ ಮಾಡುತ್ತಿದ್ದೇನೆ. ನನ್ನ ತಮ್ಮ ಸಹ ರೈಲಿನಲ್ಲಿದ್ದಾನೆ. ಅವನ್ನು ಸೇರಿಸಿ ರೈಲಿನಲ್ಲಿ ಪ್ರಯಾಣ ಮಾಡುತ್ತಿರುವ ಎಲ್ಲರಿಗೂ ಊಡಿಸ್ ಮಾಡ್ತೆನೆ ಎಂದು ಧಮ್ಕಿ ಹಾಕಿದ್ದಾನೆ.
ಪೊನ್ ಕರೆಯಿಂದ ಆತಂಕಗೊಂಡ ರೈಲು ಇಲಾಖೆ ಪೋಲಿಸರು ಎಲ್ಲಾ ಕಂಟ್ರೋಲ್ ರೂಮ್ ಗಳಿಗೂ ಕರೆ ಮಾಡಿ ಆತನ ಸಹೋದರನ ಪತ್ತೆ ಹಚ್ಚಿದ್ದಾರೆ. ಆಗ ರೈಲು ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ವಾಡಿ(ಜಂ) ನಿಲ್ದಾಣಕ್ಕೆ ಬರುತ್ತಿದ್ದಂತೆ ಆ ವ್ಯಕ್ತಿ ಡಿ 1 ಕೋಚ್ ನಲ್ಲಿ ಇರುವುದು ಪತ್ತೆಮಾಡಿ, ಆತನನ್ನು ರೈಲಿನಿಂದ ಕೆಳಗೆ ಇಳಿಸಿ ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ನನ್ನ ಸಹೋದರ ಕುಡಿದ ಮತ್ತಿನಲ್ಲಿ ನನಗೆ ಫೈನ್ ಹಾಕಿದಕ್ಕೆ ಆಕ್ರೋಶಗೊಂಡು ರೈಲು ಬ್ಲಾಸ್ಟ್ ಮಾಡುವುದಾಗಿ ಹೇಳಿದ್ದಾನೆ ಎಂದಿದ್ದಾನೆ. ಆಗ ನಿಟ್ಟೂಸಿರು ಬಿಟ್ಟ ಪೊಲೀಸ್ ರು ಹೆಚ್ಚಿನ ತನಿಖೆ ಕೈಗೊಂಡು ಬಳಿಕ ಆ ವ್ಯಕ್ತಿಯನ್ನು ಬೇರೆ ರೈಲಿನಿಂದ ಬೆಂಗಳೂರಿಗೆ ಕಳುಹಿಸಿದ್ದಾರೆ.
ಒಟ್ಟಿನಲ್ಲಿ ತನ್ನ ಸಹೋದರನಿಗಾದ ಅವಮಾನದ ಸೇಡು ತೀರಿಸಿಕೊಳ್ಳಲು ರೈಲ್ವೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕರೆ ಮಾಡಿದ್ದ ವ್ಯಕ್ತಿಯಿಂದ ಕೆಲಹೊತ್ತು ಪೊಲೀಸ್ರು ಹಾಗೂ ಪ್ರಯಾಣಿಕರಲ್ಲಿ ಆತಂಕ ಹುಟ್ಟಿಸಿದಂತೂ ಸತ್ಯ.




