ಮಡಿಕೇರಿ: ವರದಿಗೆ ತೆರಳಿದ್ದ ಪತ್ರಕರ್ತರ ಮೊಬೈಲ್ ಕಸಿದು ಪೊಲೀಸರ ದರ್ಪ

ಮಡಿಕೇರಿ: ವರದಿ ಮಾಡಲು ತೆರಳಿದ ಪತ್ರಕರ್ತರ ಮೊಬೈಲ್ ಕಸಿದು ಪೊಲೀಸ್ ಸಿಬ್ಬಂದಿ ಅಮಾನವೀಯ ವತ೯ನೆ ತೋರಿದ ಘಟನೆ ಮಡಿಕೇರಿ ಆಮಿ೯ ಕ್ಯಾಂಟೀನ್ ನಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆಯಿಂದಲೇ ಆಮಿ೯ ಕ್ಯಾಂಟೀನ್ ನಲ್ಲಿ ಸಾಕಷ್ಟು ಜನಸಂದಣಿ ಇದ್ದರಿಂದ ಪತ್ರಕರ್ತರು ವರದಿಗಾಗಿ ತೆರಳಿದ್ದರು.
ಶಕ್ತಿ ಪತ್ರಿಕೆಯ ಜಿ.ಆರ್.ಪ್ರಜ್ವಲ್ ಮತ್ತು ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾತಿ೯ ಜಿ.ಆರ್.ಪ್ರಜ್ಞಾ, ಆರ್ಮಿ ಕ್ಯಾಂಟೀನ್ ಗೆ ವರದಿಗಾಗಿ ತೆರಳಿದ್ದರು.
ಈ ಸಂದರ್ಭ ಆಮಿ೯ ಕ್ಯಾಂಟೀನ್ ಸಿಬ್ಬಂದಿ ಸೇರಿದಂತೆ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದಾರೆ. ಮಹಿಳಾ ಪತ್ರಕತೆ೯ಯ ಕೈ ಹಿಡಿದೆಳೆದು ಮೊಬೈಲ್ ಕಿತ್ತು ಎಸೆದು ಪೊಲೀಸ್ ಸಿಬ್ಬಂದಿ ತಮ್ಮ ದರ್ಪ ಮೆರೆದಿದ್ದಾರೆ.
ಘಟನೆ ಬಗ್ಗೆ ಕೊಡಗು ಜಿಲ್ಲಾ ಪತ್ರಕತ೯ರ ಸಂಘದಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ವರದಿಗಾರಿಕೆಗೆ ತೆರಳಿ ಕತ೯ವ್ಯ ನಿಭಾಯಿಸುತ್ತಿದ್ದವರ ಮೇಲೆ ಪೊಲೀಸ್ ದಬ್ಬಾಳಿಕೆ ಆರೋಪ ಮಾಡಲಾಗಿದೆ.
ಈ ಕುರಿತು ಹಿರಿಯ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ- ಆಮಿ೯ ಕ್ಯಾಂಟೀನ್ ನಲ್ಲಿದ್ದ ಸಾವ೯ಜನಿಕನಿಂದಲೂ ಪತ್ರಕತೆ೯ ಮೇಲೆ ಅಮಾನವೀಯ ವತ೯ನೆ ಎದುರಾಗುದ್ದರಿಂದ ಆಮಿ೯ ಕ್ಯಾಂಟೀನ್ ವ್ಯವಸ್ಥಾಪಕರಿಂದ ವಿಳಂಭರಹಿತ ಕ್ರಮದ ಭರವಸೆ ನೀಡಲಾಗಿದೆ.
ಈ ಘಟನೆಗೆ ಕೊಡಗು ಜಿಲ್ಲೆಯ ಪತ್ರಿಕಾ, ಮಾಧ್ಯಮ ಸಮೂಹ ಖಂಡನೆ ವ್ಯಕ್ತಪಡಿಸಿದೆ.




