ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡ : ದೇವನೂರ ಸೇರಿ 4 ಗ್ರಾಮಕ್ಕೆ ಕಟಂಕವಾದ ಬೆಣ್ಣೆ ಹಳ್ಳ ಪ್ರವಾಹ

ಧಾರವಾಡ : ಮಳೆ ನಿಂತ್ತರು ಮರದ ಹನಿ ಇನ್ನೂ ನಿಂತಿಲ್ಲ ಅನ್ನುವ ಹಾಗೆ ಮಳೆ ಈಗ ಕಡಿಮೆಯಾಗಿದ್ದು, ಆದರೆ ನಿರಂತರ ಮಳೆಯಿಂದಾಗಿ ಹಲವು ಅವಾಂತಗಳು ಸೃಷ್ಠಿಯಾಗಿವೆ. ಕುಂದಗೋಳ ತಾಲೂಕಿನ ದೇವನೂರ ಗ್ರಾಮ ಸೇರಿ ನಾಲ್ಕು ಗ್ರಾಮದ ರೈತರ ಜಮೀನುಗಳಿಗೆ ನೀರು ನುಗ್ಗಿದ್ದು, ನೂರಾರು ಎಕರೆ ಜಮೀನುಗಳಲ್ಲಿ ಬೆಳೆದ ಬೆಳೆ ಕೊಚಿಕೊಂಡು ಹೋಗಿ ಹಲವು ಬೆಳೆಗಳು ಜಲಾವೃತಗೊಂಡಿವೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ದೇವನೂರು, ಕಮ್ಮಡೊಳ್ಳಿ ಎರೆಬೂದಿಹಾಳ, ಹಂಚಿನಾಳ ಹಾಗೂ ಶಿರೂರ ಗ್ರಾಮದ ರೈತರ ಕೃಷಿ ಭೂಮಿ ಜಮೀನುಗಳಿಗೆ ನೀರು ನುಗ್ಗಿ ಕಷ್ಟ ಪಟ್ಟ ಬೆಳೆದ ಬೆಳೆ ಈಗ ನೀರು ಪಾಲಾಗಿದೆ. ಶೆಂಗಾ, ಹತ್ತಿ, ಮೆಣಸಿನಕಾಯಿ ಸೇರಿದಂತೆ ಇನ್ನಿತರ ಮುಂಗಾರು ಬೆಳೆಗಳು ಜಲಾವೃತಗೊಂಡಿದ್ದು, ಕೇಲವು ಕಡೆಗಳಲ್ಲಿ ಬೆಳೆಗಳು ಬೆಣ್ಣೆ ಹಳ್ಳದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ರೈತರನ್ನು ಕಣ್ಣಿರಲ್ಲಿ ಕೈ ತೊಳೆಯುವಂತೆ ಮಾಡಿದೆ.

ಸುಮಾರು ಬೆಣ್ಣೆ ಹಳ್ಳ ಅಕ್ಕ ಪಕ್ಕದಲ್ಲಿ ಬರುವ ಸುಮಾರು 150ರಿಂದ 200 ಎಕರೆ ಜಮೀನುಗಳಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಇಂದು ಮುಂಜಾನೇ ಕೃಷಿ ಭೂಮಿಗಳಿಗೆ ಆಗಮಿಸಿದ ರೈತರು ತಮ್ಮ ಹೊಲದಲ್ಲಿ ನೀರು ನಿಂತಿರುವುದನ್ನು ಪರಿಶೀಲನೆಗೆ ಮುಂದಗಿದ್ದಾರೆ. ಅಲ್ಲದೆ ಪ್ರತಿ ವರ್ಷ ನಮ್ಮಗೆ ಮುಂಗಾರು ಬೆಳೆ ಕೈಗೆ ಸಿಗುವುದೇ ಅಪರೂಪವಾಗಿದೆ.

ಕಳೆದ ಎರಡು ವರ್ಷಗಳಿಂದ ಒಂದು ಬಾರಿಯ ನಾವು ಮುಂಗಾರು ಬೆಳೆಯನ್ನು ತೆಗೆದುಕೊಳ್ಳಲು ಆಗದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಬೆಣ್ಣೆಹಳದ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕು ಇದರಿಂದಾಗಿ ಪ್ರತಿ ವರ್ಷ ಆಗುವ ಬೆಳೆ ಹಾನಿ ತಪ್ಪಿಸಬಹುದಾಗಿದೆ ಎಂದು ಒತ್ತಾಯ ಮಾಡುತ್ತಿದ್ದಾರೆ

Related Articles

Leave a Reply

Your email address will not be published. Required fields are marked *

Back to top button