ಜಿಲ್ಲಾ ಸುದ್ದಿಹುಬ್ಬಳ್ಳಿ - ಧಾರವಾಡ

ಧಾರವಾಡದಲ್ಲಿ ಧರೆಗುರುಳಿದ ಮರ; ಅಕ್ಕ ಪಕ್ಕದ ನಗರಗಳಿಗೆ ವಿದ್ಯುತ್ ಸಂಪರ್ಕ ಕಡಿತ

ಧಾರವಾಡ : ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಕಳೆದ ದಿನ ತಡ ರಾತ್ರಿ ಬೃಹತ್ ಮರವೊಂದು ಬೇರು ಸಮೇತ ಧರೆಗುರುಳಿದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

ಧಾರವಾಡ ನಗರದ ಸಾರಸ್ವತಪುರ ಬಳಿಯ ಕಲಘಟಗಿ ಧಾರವಾಡ ಮುಖ್ಯ ರಸ್ಥೆಯಲ್ಲಿ ತಡ ರಾತ್ರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಮರ ರೆಂಬೆಗಳು ವಿದ್ಯುತ್ ಲೈನ್‌ಗಳ ಮೇಲೆ ಬಿದಿದ್ದು ಇದರಿಂದಾಗಿ ಸಾರಸ್ವತಪುರ, ತೇಜಸ್ವಿ ನಗರ, ವಿದ್ಯಾನಗರ ಕೆಲವು ಬಡವಾಣಿಗಳಿಗೆ ಮುಂಜಾಗ್ರತ ಕ್ರಮವಾಗಿ ವಿದ್ಯುತ್ ಸ್ಥಗಿತ ಮಾಡಲಾಗಿತ್ತು.

ಇನ್ನೂ ಮರವು ರಸ್ತೆಯ ಮೇಲೆ ಬುಡ ಸಮೇತ ಮರ ಧರೆಗುರುಳಿದ್ದು, ಕೆಲಕಾಲ‌ ಕಲಘಟಗಿ ಧಾರವಾಡ ಮುಖ್ಯ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಸ್ಥಳಿಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧಿಕಾರಿಗಳು ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಮರದ ರೆಂಬೆಗಳನ್ನು ತೆರವು ಮಾಡಿ ತಡರಾತ್ರಿ ಸಂಚಾರಕ್ಕೆ ಅನವು ಮಾಡಿಕೊಟ್ಟಿದ್ದಾರೆ. ಅಲ್ಲದೆ ಇಂದು ಮುಂಜಾನೆ ಕೂಡಾ ಮರ ತೆರವು ಕಾರ್ಯಚಾರಣೆಗೆ ಪಾಲಿಕೆಯ ಪೌರ ಕಾರ್ಮಿಕರು ಮುಂದಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button